ಸ್ಫೋಟಕ ಸಾಮಗ್ರಿ ಸಂಗ್ರಹಿಸಿದ್ದವ ಅರೆಸ್ಟ್

kdr 5
ಕಡೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಗಳನ್ನು ಪಿಎಸ್‌ಐ ಪವನ್‌ಕುಮಾರ್ ಮತ್ತು ಸಿಬ್ಬಂದಿ ವಶಕ್ಕೆ ಪಡೆದರು.
Published on

ಕಡೂರು: ಪಟ್ಟಣದ ವೆಂಕಟೇಶ್ವರ ಬಡಾವಣೆಯ ಮನೆಯಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಿದ್ದವನನ್ನು ಕಡೂರು ಪೊಲೀಸರು ಹಾಗೂ ಚಿಕ್ಕಮಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸರು ಬಂಧಿಸಿ, ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದರು.

ಪಟ್ಟಣದ ನಾಗರಾಜ್ ಎಂಬಾತ ಮನೆಯ ಮಂಚದ ಕೆಳಗೆ ಮೂರು ಬಾಕ್ಸ್‌ಗಳಲ್ಲಿ ಸುಮಾರು 389 ಜಿಲೆಟಿನ್‌ಪೇಸ್ಟ್ ಟ್ಯೂಬ್‌ಗಳು ಹಾಗೂ 250 ಅಡಿ ಉದ್ದದ ಸ್ಫೋಟಕದ ಬತ್ತಿ ಸಂಗ್ರಹಿಸಿಟ್ಟಿದ್ದ. ಜಿಲೆಟಿನ್‌ಪೇಸ್ಟ್ ಟ್ಯೂಬ್ ಸ್ಫೋಟಕಗಳನ್ನು ಕಲ್ಲುಕ್ವಾರಿಗಳನ್ನು ಸ್ಫೋಟಿಸಲು ಬಳಸಲಾಗುತ್ತದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net