

ಹುಮನಾಬಾದ್: ದೇಶದ ಸ್ವಾತಂತ್ರ್ಯಕ್ಕಾಗಿ ಮಕ್ಕಳು ಹೋರಾಟ ಮಾಡಿ, ಪ್ರಾಣ ಬಲಿದಾನ ಮಾಡಿದ್ದಾರೆ. ಅಂತಹ ಸ್ಫೂರ್ತಿ, ಹೋರಾಟದ ಕಿಚ್ಚು ನಮ್ಮ ಮಕ್ಕಳಲ್ಲಿ ಬರಬೇಕು ಎಂದು ಉಪನ್ಯಾಸಕ ಶಶಿಕಾಂತ ಯಲಾಲ್ ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬಾಲಬಾರತಿ ವಿದ್ಯಾಮಂದಿರ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಗೋವಿಂದಸಿಂಗರ ಮಕ್ಕಳಾದ ಝೋರಾವರ ಮತ್ತು ಫತೇವಾರ್‌ಸಿಂಗ್ ಇಬ್ಬರು ಔರಂಗಜೇಬನ ಮತಾತಂರಕ್ಕೆ ಒಪ್ಪದೆ ದೇಶ ಹಾಗೂ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು ಎಂದರು.
ಸಂಸ್ಥೆ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಮಾತನಾಡಿ, ಪ್ರಸ್ತುತ ಮಕ್ಕಳು ಮೊಬೈಲ್, ಟಿವಿಗಳಿಗೆ ಜೋತು ಬೀಳುವುದು ಬಿಟ್ಟು ಧೈರ್ಯ, ಸಾಹಸದ ಕಥೆಗಳನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ದೇಶ ಭಕ್ತಿಯ ಅರಿವು ಆಗುತ್ತದೆ ಎಂದರು.
ಮುಖ್ಯಗುರು ಇಂದುಮತಿ ಮಠ, ವಿದ್ಯಾವತಿ ಯರನಾಳೆ, ಮಲ್ಲಿಕಾರ್ಜುನ ಭಂಗೂರೆ, ದಿಲೀಪ ನಾರಾಯಣ, ನಿಜಲಿಂಗಪ್ಪ ಜಕ್ಕಾ, ಶ್ರೀಶೈಲ ಬೇನೂರ, ಗೋವಿಂದಸಿAಗ್ ತಿವಾರಿ, ಶರಣಪ್ಪ ಹುಲಸೂರೆ, ವೀರಶೆಟ್ಟಿ ಜೀರಗಿ, ಶಿವಕಾಂತಾ ನಾವದಗಿ, ರೂಪವತಿ ಸಜ್ಜನ್, ಸತಿದೇವಿ, ಸಂಗೀತಾ ಸರಸ್ವತಿ, ಜನಾಬಾಯಿ, ಇಂದುಬಾಯಿ, ಶಿವಲೀಲಾ ಇತರರಿದ್ದರು. ರಾಧಿಕಾ ಸ್ವಾಗತಿಸಿದರು. ಭೂಮಿಕಾ ನಿರೂಪಣೆ ಮಾಡಿದರು. ಉಷಾ ವಂದಿಸಿದರು.