ಸ್ಫೂರ್ತಿ ತಂದಿದ್ದ ಚಲೇಜಾವ್ ಚಳವಳಿ

12 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶ ಮತ್ತು ನಾಡಿನ ಸ್ವಾತಂತ್ರೃಹೋರಾಟದ ಹುತಾತ್ಮರ ತ್ಯಾಗ, ಬಲಿದಾನ, ನಿಸ್ವಾರ್ಥ ಬದುಕನ್ನು ನಾವು ಸ್ಮರಿಸಬೇಕು. ವಿದ್ಯಾರ್ಥಿಗಳು ತಂದೆ-ತಾಯಿ, ಸಮಾಜ ಹಾಗೂ ಗುರುವಿನ ಋಣ ತೀರಿಸಿ ಸಾಧಕರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಆರ್.ಸಿ. ಹಲಗತ್ತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನವನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕದಲ್ಲಿ ಸ್ವಾತಂತ್ರೃ ಹೋರಾಟದ ಆ ದಿನಗಳು ಸ್ಮರಣೆಯಲ್ಲಿ ಕರ್ನಾಟಕದಲ್ಲಿ ಚಲೇಜಾವ್ ಚಳವಳಿಯ ಸ್ವರೂಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದಯ ನಾಯಕ ಉಪನ್ಯಾಸ ನೀಡಿ, ಚಲೇಜಾವ್ ಚಳವಳಿ ಕರ್ನಾಟಕದಲ್ಲಿ ಹೋರಾಟಗಾರರಲ್ಲಿ ಜಾಗೃತಿಗಿಂತ ಜನಜಾಗೃತಿ ಮೂಡಿಸಿ ಹೋರಾಟಗಾರರಲ್ಲಿ ಸ್ಫೂರ್ತಿ ತಂದಿತ್ತು. ಈ ಹೋರಾಟ ಕರ್ನಾಟಕದಲ್ಲೂ ಉಗ್ರ ಸ್ವರೂಪದ್ದಾಗಿತ್ತು. ಈ ಚಳವಳಿಯಲ್ಲಿ ಎಲ್ಲ ಕ್ಷೇತ್ರದವರೂ ಪಾಲ್ಗೊಂಡಿದ್ದರು. ಆರ್.ಆರ್. ದಿವಾಕರ್, ಹರ್ಡೇಕರ ಮಂಜಪ್ಪ, ಎಸ್. ನಿಜಲಿಂಗಪ್ಪ, ಶಿರೂರ ವೀರಭದ್ರಪ್ಪ, ಶಿವಮೂರ್ತಿಸ್ವಾಮಿ ಅಳವಂಡಿ, ಇತರರು ಚಳವಳಿ ನೇತೃತ್ವ ವಹಿಸಿದ್ದರು ಎಂದರು.
ಶಂಕರ ಕುಂಬಿ, ಪ್ರೊ. ವೀರನಗೌಡ ಮರಿಗೌಡ್ರ, ಮಹಾಂತೇಶ ನರೇಗಲ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಅಶೋಕ ಸವಣೂರ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪ ಹೊಸಮನಿ, ರುಕ್ಮಿಣಿ ಕುಲಕರ್ಣಿ, ವಿದ್ಯಾರ್ಥಿಗಳು, ಶಿಕ್ಷಕರು, ಇತರರು ಇದ್ದರು.
ಗಾಯತ್ರಿ ಹುದ್ದಾರ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ವಸ್ತ್ರಮಠ ನಿರೂಪಿಸಿದರು. ಬಿ.ವಿ. ಮಡಿವಾಳರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net