

ಕಲಬುರಗಿ: ಶತಮಾನದ ಹಿಂದೆ ಸ್ವಾಮಿ ವಿವೇಕಾನಂದರು ಬೋಧಿಸಿದ ಪ್ರತಿ ಮಾತು, ನುಡಿ ಸಾರ್ವಕಾಲಿಕ ಸ್ಫೂರ್ತಿಯ ಬಿಂದುಗಳಾಗಿವೆ. ಅವುಗಳ ಪಾಲನೆ, ಆಲಿಸುವಿಕೆಯೇ ಶಕ್ತಿ, ಸ್ಫೂರ್ತಿ ತುಂಬುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಬಣ್ಣಿಸಿದರು.
ನಗರದ ರಾಮಕೃಷ್ಣ ಆಶ್ರಮದ ನಿವೇದಿತಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟಪಟ್ಟು ದುಡಿದು, ಕಾಯಕದಲ್ಲಿ ಶ್ರದ್ಧೆ ಮೂಡಿಸಲು ವಿವೇಕರು ಜ್ಞಾನ ನೀಡಿದ್ದಾರೆ. ಗರ್ವ ಬಿಟ್ಟು, ಆಳಾಗಿ ದುಡಿದರೆ ನಾಯಕರಾಗಬಹುದು. ರಾಷ್ಟ್ರೂ ಯ ಆದರ್ಶವನ್ನು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕೊಪ್ಪಳದ ಶ್ರೀರಾಮಕೃಷ್ಣಾನಂದ ಆಶ್ರಮದ ಶ್ರೀ ಸ್ವಾಮಿ ಚೈತನ್ಯಾನಂದಜಿ ಮಹಾರಾಜ್ ಮಾತನಾಡಿದರು. ಮಹಾದೇವಯ್ಯ ಕರದಳ್ಳಿ ಮಾತನಾಡಿದರು.
ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ ಮಾತನಾಡಿದರು. ಬಿಹಾರ ರಾಮಕೃಷ್ಣ ಮಿಷನ್ ಸೇವಾಶ್ರಮದ ಶ್ರೀ ಸ್ವಾಮಿ ವಿಭಕರಾನಂದಜಿ ಮಹಾರಾಜ್ ಆಶೀರ್ವಚನ ನೀಡಿದರು. ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಇತರರಿದ್ದರು.