

ಚಿಕ್ಕಮಗಳೂರು: ಸ್ಕೌಟಿಂಗ್ ಚಳುವಳಿಯು ಈ ಸಮಾಜವನ್ನು ಸರಿದಾರಿಗೆ ತರುವ ಹಿನ್ನೆಲೆಯಲ್ಲಿ ಹುಟ್ಟಿ ಬಂದ ಘಟಕವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮೊದಲು ೧೯೦೭ರಲ್ಲಿ ಹುಟ್ಟಿ ೨೦ ಮಕ್ಕಳಿಂದ ಪ್ರಾರಂಭವಾಗಿ ಲಾರ್ಡ್ ಬೇಡನ್ ಪೊವೆಲ್ ಅವರ ಯೋಚನೆಗಳು ಉತ್ತಮ ಚಿಂತನೆಗಳನ್ನು ಹೊಂದಿದ್ದರಿAದ ಇಂದು ಅಗಣಿತವಾಗಿ ಬೆಳೆದು ೨೦೦ಕ್ಕೂ ಹೆಚ್ಚು ದೇಶಗಳಲ್ಲಿ ಪಸರಿಸಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಉಪಾಧ್ಯಕ್ಷ ಎ.ಎನ್. ಮಹೇಶ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ಲಾರ್ಡ್ಬೇಡನ್ ಪೊವೆಲ್ ಮತ್ತು ಲೇಡಿ ಬೇಡನ್ ಪೊವೆಲ್‌ರವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಚಿಂತನಾ ಮತ್ತು ಭ್ರಾತೃತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಬಿಪಿ ಡೇ ಎಂದರೆ ಬ್ಲಡ್ ಪ್ಲಜರ್ ಡೇ ಅಲ್ಲ ಬೇಡನ್ ಪೊವೆಲ್ ಡೇ ಎಂದು ಕರೆಯಲಾಗುತ್ತದೆ ಎಂದರು.
ಕರ್ನಾಟಕದಲ್ಲಿ ೧೯೦೯ರಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಪ್ರಾರಂಭವಾಯಿತು. ಈ ಚಳುವಳಿಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ. ಸ್ಕೌಟಿಂಗ್ ಚಳವಳಿಯು ಜನಸ್ನೇಹಿಯಾಗಿದ್ದು, ಜನರನ್ನು ಆಕರ್ಷಿಸುತ್ತದೆ. ಸ್ಕೌಟಿಂಗ್‌ನಲ್ಲಿ ಉತ್ತಮ ವಿಚಾರ-ಚಿಂತನೆಗಳನ್ನು ಹೊಂದಿದ್ದರಿAದ ಇಂದು ವಿಶ್ವದೆಲ್ಲೆಡೆ ತನ್ನ ಶಾಖೆಗಳನ್ನು ಹೊಂದಿದೆ ಎಂದು ತಿಳಿಸಿದರು.
ಸ್ಕೌಟಿಂಗ್ ಚಳವಳಿಯು ಹಲವಾರು ಚಟುವಟಿಕೆಗಳಿಂದ ಕೂಡಿದ್ದು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಲು ಸಹಾಯಕವಾಗುವ ಅಂಶಗಳಿರುತ್ತದೆ. ಮಕ್ಕಳು ಪರಿಸರದ ಜೊತೆ ನೇರ ಸಂಬAಧÀವನ್ನು ಹೊಂದುತ್ತಾರೆ. ಸ್ವಾವಲಂಭಿಗಳಾಗುತ್ತಾರೆ. ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.
ಷಡಕ್ಷರಿ ಅವರು ೫೦ ವರ್ಷಗಳಿಂದ ಸ್ಕೌಟಿಂಗ್ ಚಳವಳಿಯಲ್ಲಿ ಭಾಗವಹಿಸಿ ಮಾಡೆಲ್ ಶಾಲೆಯನ್ನು ಸ್ಕೌಟಿಂಗ್ ಚಳವಳಿಯಲ್ಲಿ ನಿರಂತರವಾಗಿ ತೊಡಗಿಸಿ ಸಂಸ್ಥೆಗೆ ತಮ್ಮ ಸಮಯ ಮತ್ತು ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕದ ಬೇಡೆನ್ ಪೊವೆಲ್ ಎಂದು ಹೆಸರಾಗಿದ್ದಾರೆ ಎಂದು ಶ್ಲಾಘಿಸಿದರು.
ಅಡ್ವೆಂಚರ್ ಕ್ಲಬ್‌ನ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ನನಗೆ ಈ ಕಾರ್ಯಕ್ರಮ ಹೊಸತಾಗಿದ್ದು ಸಂತಸ ತಂದಿದೆ. ಸ್ಕೌಟಿಂಗ್ ಮಕ್ಕಳಲ್ಲಿ ಧೈರ್ಯ ತುಂಬುತ್ತದೆ. ಮಾಡೆಲ್ ಶಾಲೆಯ ಪರಿಸರ ಉತ್ತಮ ಮತ್ತು ಸುಂದರವಾಗಿದ್ದು ಬಹುತೇಕ ಶಾಲೆಗಳಿಗೆ ಇಂತಹ ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲಾ ಸಂಸ್ಥಾಪಕ ಷಡಕ್ಷರಿ ಮಾತನಾಡಿ, ಸ್ಕೌಟಿಂಗ್ ಶಿಕ್ಷಣ ಪದ್ದತಿಯನ್ನು ಕೊಟ್ಟಿರುವ ಲಾರ್ಡ್ ಬೇಡನ್ ಪೊವೆಲ್ ಅವರ ಜನ್ಮ ದಿನಾಚರಣೆಯನ್ನು ಇಂದು ಆಚರಿಸುತ್ತಿz್ದೆÃವೆ. ಮಕ್ಕಳ ಜೊತೆಗಿನ ಅನುಭವ ಸಂತಸ ತರುತ್ತದೆ. ಏಕೆಂದರೆ ಮಕ್ಕಳಲ್ಲಿ ದೇವರನ್ನು ಕಾಣಬಹುದು ಎಂದರು.
ಓರ್ವ ವ್ಯಕ್ತಿ ಒಬ್ಬ ವ್ಯಕ್ತಿಯನ್ನು ತಿದ್ದಿದರೆ ಸಾಕು ಸಮಾಜದ ಒಬ್ಬ ಕಿಡಿಗೇಡಿ ಕಡಿಮೆಯಾಗುತ್ತಾನೆ. ಆ ಧ್ಯೇಯವನ್ನು ಇಟ್ಟುಕೊಂಡು ಸ್ಕೌಟಿಂಗ್ ಚಳವಳಿ ಕೆಲಸ ಮಾಡುತ್ತದೆ. ಮನೆಯ ಅನುಕೂಲವನ್ನು ಬಿಟ್ಟು ಎಲ್ಲದಕ್ಕೂ ಹೊಂದಿಕೊಳ್ಳುವ ಗುಣವನ್ನು ಕಲಿಸುತ್ತದೆ. ಹಾಗಾಗಿ ಸ್ಕೌಟಿಂಗ್ ಚಳವಳಿಯು ವಿದ್ಯಾರ್ಥಿಗಳನ್ನು ದೈಹಿಕÀವಾಗಿ, ಮಾನಸಿಕವಾಗಿ, ಭೌತಿಕವಾಗಿ ಸ್ಪೂರ್ತಿಯನ್ನು ತುಂಬುತ್ತದೆ ಎಂದು ನುಡಿದರು.
ಯಾರು ದೇವರನ್ನು ಮತ್ತು ಸಮಾಜವನ್ನು ಪ್ರೀತಿಸುತ್ತಾರೋ ಅವರು ಎಂದಿಗೂ ಇತರರಿಗೆ ತೊಂದರೆ ಉಂಟುಮಾಡವುದಿಲ್ಲ. ಬೇರೆಯವರ ಸೇವೆ ಮಾಡಲು ಪುಣ್ಯವಿರಬೇಕು ಅದು ಸ್ಕೌಟಿಂಗ್‌ನಿAದ ಮಾತ್ರ ಲಭಿಸುತ್ತದೆ. ಈ ಸ್ಕೌಟಿಂಗ್ ಚಳವಳಿಯ ಮೂಲಕ ಮಕ್ಕ¼ಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿ ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ನೀಡುತ್ತೇವೆ ಎಂದು ಪೋಷಕರಿಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕಿ ವಿಶಾಲ ಷಡಕ್ಷರಿ, ಶಾಲಾ ಮುಖ್ಯ ಶಿಕ್ಷಕ ಯೋಗೀಶ್, ವಿದ್ಯಾರ್ಥಿಗಳಾದ ನಿಮ್ರಾ ಶರಫೈನ್, ಸೋನಿಕಾ ಜಿ. ಶೆಟ್ಟಿ ಮತ್ತಿತರರಿದ್ದರು.