ಸ್ಪೋರ್ಟ್ಸ್ ಕ್ಲೈಂಬಿಂಗ್‌ನಲ್ಲಿ ಜೆ. ಧನುಷ್‌ಗೆ ಬೆಳ್ಳಿ ಪದಕ

IMG-20221217-WA0037.jpg
Published on

ದಾವಣಗೆರೆ: ಜಾರ್ಖಂಡ್‌ನ ಜೆಮ್‌ಷೆಡ್‌ಪುರದಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಷ್ಯನ್ ಕಿಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೋರ್ಟ್ಸ್ ಕ್ಲೈಂಬಿಂಗ್ ಕ್ರೀಡೆಯಲ್ಲಿ ಸಬ್ ಜೂನಿಯನ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದಾವಣಗೆರೆಯ ಜೆ. ಧನುಷ್ ರಜತ ಪದಕ ಗಳಿಸಿದ್ದಾನೆ.

ಜಿಲ್ಲಾ ಕ್ರೀಡಾಂಗಣದ ಕ್ರೀಡಾರೋಹಣದ ಈ ವಿದ್ಯಾರ್ಥಿ, ತರಳಬಾಳು ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ದಾವಣಗೆರೆ ಇತಿಹಾಸದಲ್ಲಿ ಮೊದಲ ಬಾರಿಗೆ 13 ವರ್ಷದೊಳಗಿನವರ ಲೀಡ್ ವಿಭಾಗದಲ್ಲಿ ಬೆಳ್ಳಿ ಪದಕ ಬಹುಮಾನ ಲಭಿಸಿದೆ ಎಂದು ಕ್ರೀಡಾರೋಹಣ ತರಬೇತುದಾರ ಪಿ.ಎಲ್.ಕೆ. ಅಶ್ಮತ್ ಉಲ್ಲಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಧನುಷ್ ಉತ್ತರಕಾಶಿಯಲ್ಲಿ ಈ ಹಿಂದೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಪೋರ್ಟ್ಸ್ ಕ್ಲೈಂಬಿಂಗ್‌ನಲ್ಲೂ ಬೆಳ್ಳಿ ಪದಕ ಗಳಿಸಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 10 ರಾಷ್ಟ್ರದ 105 ಸ್ಪರ್ಧಾಳು ಭಾಗವಹಿಸಿದ್ದರು. ಭಾರತಕ್ಕೆ ಕೀರ್ತಿ ತಂದ ಈ ಬಾಲಕನಿಗೆ, ಇತರೆ ಕ್ರೀಡಾ ಸಾಧಕರಿಗೆ ಸಿಗುವ ಉತ್ತೇಜನ ಸಿಗುತ್ತಿಲ್ಲ ಎಂದು ವಿವರಿಸಿದರು.

ಇದೇ ಚಾಂಪಿಯನ್‌ಶಿಪ್‌ನ ಲೀಡ್ ವಿಭಾಗದಲ್ಲಿ ಗಂಗಾ ವೃಷ್ಣವಿ 24ನೇ ಸ್ಥಾನ, ಸಬ್ ಜೂನಿಯರ್‌ನ ಸ್ಪೀಡ್ ವಿಭಾಗದಲ್ಲಿ ಡಿ.ಛಾಣಸ್ಯ ನಾಲ್ಕನೇ ಸ್ಥಾನ, ಪವಿತ್ರಾ ಹೆಬ್ಬಳ್ಳಿ ಎಂಟನೇ ಸ್ಥಾನ ಗಳಿಸಿದ್ದಾಳೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಾಧಕ ಸ್ಪರ್ಧಾಳುಗಳಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net