ಸ್ಪೀಡ್ ಲೇಸರ್ ಡಿಟೆಕ್ಟಿವ್ ಅಳವಡಿಕೆ

25 YERRISWAMY 01
Published on

ಬಳ್ಳಾರಿ ; ಜಿಲ್ಲೆಯಲ್ಲಿ ರಸ್ತೆ ಅಘಘಾತ ನಿಯಂತ್ರಿಸಲು ಹಾಗೂ ಪ್ರಕರಣ ದಾಖಲಿಸುವ ಸಮಯದಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಸ್ಪೀಡ್ ಲೇಸರ್ ಡಿಟೆಕ್ಟಿವ್ ಎಂಬ ಯಂತ್ರವನ್ನು ನಗರದಲ್ಲಿ ತರಲಾಗಿದೆ ಎಂದು ಎಸ್ಪಿ ರಂಜಿತ ಕುಮಾರ ಬಂಡಾರು ಮಾಹಿತಿ ನೀಡಿದರು.
ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದರಲ್ಲಿ ಅಲ್ಕೋಹಾಲ್ ಮೀಟರ್ ಹಾಗೂ ಬಾಡಿ ವೋರ್ನ ಕ್ಯಾಮೆರಾ ಎಂಬ ಸಾಧನಗಳನ್ನು ಈ ಯಂತ್ರದಲ್ಲಿ ಹೊಂದಿವೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 305 ಅಪಘಾತಗಳು ಸಂಭವಿಸಿದ್ದು, 118 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಾಗಿ ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವೆ. ಮದ್ಯ ಸೇವನೆಯೊಂದಿಗೆ ವಾಹನ ಚಲಾಯಿಸದರೆ ಈ ಡಿಜಿಟಲ್ ಯಂತ್ರದ ಮೂಲಕ ತಪಾಸಣೆಗೆ ಒಳಪಡಿಸಿದ ವೇಳೆ 30 ಎಂಜಿ ಗೂ ಹೆಚ್ಚು ಸೇವನೆ ತೋರಿಸಿದರೆ ಅವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುವುದು. ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಭಾವಚಿತ್ರ ವಿಡಿಯೋ ದಾಖಲಿಸಿ ಸಾಕ್ಷಗಳು ಸಂಗ್ರಹಿಸುವ ಉಪಕರಣವಾಗಿದೆ. ಈಗಾಗಲೇ ನಗರದಲ್ಲಿ ಹತ್ತು ದಿನಗಳಲ್ಲಿ ನಿಯಮ ಉಲ್ಲಂಘಿಸಿದ 232 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, 2.32 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಅತಿ ವೇಗದಲ್ಲಿ ವಾಹನ ಚಾಲನೆ , ಅಜಾಗರೂಕ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಟ್ರಿಪಲ್ ರೈಡಿಂಗ್‌ಗಳನ್ನು ಪತ್ತೆ ಮಾಡಲು ಈ ಗನ್‌ಗಳು ಸಹಕಾರಿಯಾಗಲಿವೆ. ಬಳ್ಳಾರಿ ಜಿಲ್ಲೆಗೆ ಮೂರು ಸ್ಪೀಡ್ ಲೇಸರ್ ಗನ್ ಬಂದಿದ್ದು, ಒಂದು ಸ್ಪೀಡ್ ಲೇಸರ್ ಗನ್ ಅಂದಾಜು ಎಂಟು ಲಕ್ಷ ರೂ. ಇದೆ. ಬಳ್ಳಾರಿ ನಗರ, ತೋರಣಗಲ್ಲು, ಸಿರುಗುಪ್ಪದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net