

ಚಿಕ್ಕೋಡಿ ಗ್ರಾಮಿಣ: ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಕರ್ಲಹೊಂಡ ಲಿಂಗೇಶ್ವರ ಜಾತ್ರೆ ನಿಮಿತ್ತ ಶುಕ್ರವಾರ ಕೈಯಲ್ಲಿ ಎತ್ತು ಹಿಡಿದು ಓಡುವ ಸ್ಪರ್ಧೆಗಳು ಜನಮನ ಸೆಳೆದವು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನಾಗರಾಳ ಗ್ರಾಮದ ಸಂಜಯ ಹೆಗ್ಗನ್ನವರ, ದ್ವಿತೀಯ ಹಿರೇಕೊಡಿ ಗ್ರಾಮದ ಬಾಳು ಬರಗಾಲಿ, ತೃತೀಯ ಯಕ್ಸಂಬಾದ ಕೇದಾರಿ ಹಿಟಣೆ ಹಾಗೂ ಚತುರ್ಥ ಬಹುಮಾನವನ್ನು ಹೆಗನ್ನವರ ಪಡೆದರು.
ಕರ್ಲಹೊಂಡ ಲಿಂಗೇಶ್ವರ ಸೇವಾ ಸಂಘದ ಸದಸ್ಯರಾದ ಅಶೀಷ ಹುಕ್ಕೇರಿ, ರಮೇಶ ಕಮ್ಮಾರ, ರವಿ ಹಿಟಣೆ, ಸುರೇಂದ್ರ ಕಬಾಡೆ, ಸತೀಶ ಕಬಾಡೆ, ಗಂಗಾಧರ ಹಿರೇಮಠ, ಸಚೀನ ಮಾನೆ, ಕೇದಾರಿ ಗಿಡ್ಡ, ಪುಂಡಲೀಕ ಹಿಟಣೆ, ಮಲ್ಲಪ್ಪ ಕಬಾಡೆ ಇತರರಿದ್ದರು.