

ಚಾಮರಾಜನಗರ: ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಸ್ಪರ್ಧೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶ್ರೀರಾಮಶೇಷ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ಪ್ರದೀಪ್ ಕುಮಾರ್ ದೀಕ್ಷಿತ್ ಸಲಹೆ ನೀಡಿದರು.
ನಗರದ ಮಾರಿಗುಡಿ ಹಿಂಭಾಗ ಇರುವ ಶ್ರೀಪರಿಮಳ ರಾಮ ವಿದ್ಯಾಮಂದಿರದಲ್ಲಿ ಪಾಲಕರಿಗಾಗಿ ಶನಿವಾರ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪಾಲಕರು ತಮ್ಮ ಮಕ್ಕಳ ಉಜ್ಜಲ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಶ್ರೀರಾಮ ಶೇಷ ಸಂಸ್ಕೃತ ಪಾಠಶಾಲೆ 18 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡಿದೆ ಎಂದರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ಮಕ್ಕಳು ಗುರು-ಹಿರಿಯರಿಗೆ ಗೌರವ ಸಲ್ಲಿಸುವ ಪ್ರವೃತ್ತಿ ಬೆಳೆಸಿಕೊಂಡಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಮುಖ್ಯ ಶಿಕ್ಷಕಿ ಎಂ.ಜ್ಯೋತಿ. ತೀರ್ಪುಗಾರರಾದ ಪದ್ಮಾಕ್ಷಿ, ಆರ್.ವಿ.ಭಾಗ್ಯಲಕ್ಷ್ಮೀ, ರಾಮ್ಪ್ರಸಾದ್, ಸುನೀಲ್ ಇತರರಿದ್ದರು.