ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ

klb4
ಅಫಜಲಪುರದ ಮಳೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯನ್ನು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು. ಚಂದ್ರಶೇಖರ ಕರಜಗಿ, ವಿಜಯಕುಮಾರ ಸಾಲಿಮಠ, ಡಾ.ಬಸವರಾಜ ಚಿಂಚೋಳಿ, ಆನಂದ ಕುಂಬಾರ, ಶಿವಯೋಗಪ್ಪ ಸಾಲುಟಗಿ ಇದ್ದರು.
Published on

ಅಫಜಲಪುರ: ಜಗತ್ತು ಸಾಕಷ್ಟು ಮುಂದುವರಿದಿದ್ದು, ಹೀಗಾಗಿ ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಮಳೇಂದ್ರ ಮಠದ ಶ್ರೀ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು ಹೇಳಿದರು.

ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಮಠದಲ್ಲಿ ಶ್ರಾವಣ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾನುವಾರ ಏರ್ಪಡಿಸಿದ್ದ ಕನ್ನಡ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಇಂದು ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಇದ್ದು, ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ e್ಞÁನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಎಂ.ಜೆ.ಪಟೇಲï ಮಾತನಾಡಿ, ಸೋಲು-ಗೆಲುವು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವಾದದು. ವಿಷಯದ ಪರಿe್ಞÁನ ಪಡೆದುಕೊಂಡು ಭಾಷಣ ಕಲೆಯನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು ಅವಶ್ಯಕವಾಗಿದೆ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರುವುದು ಕಾರ್ಯಕ್ರಮದ ಉz್ದೆÃಶವಾಗಿದೆ ಎಂದರು.

ವೀರಶೈವ ಸಮಾಜದ ತಾಲೂಕು ಅಧ್ಯP್ಷÀ ಚಂದ್ರಶೇಖರ ಕರಜಗಿ, ಭಾಷಣ ಸ್ಪರ್ಧೆಯ ನಿರ್ಣಾಯಕ ವಿಜಯಕುಮಾರ ಸಾಲಿಮಠ, ವಕೀಲ ಡಾ.ಬಸವರಾಜ ಚಿಂಚೋಳಿ, ಪ್ರೌಢಶಾಲೆ ಮುಖ್ಯಗುರು ಆನಂದ ಕುಂಬಾರ, ಪ್ರಮುಖರಾದ ಶಿವಯೋಗಪ್ಪ ಸಾಲುಟಗಿ, ಡಾ. ಖಾಸೀಂ ಕುಲಾಲಿ, ಶೈಲೇಶ ಗುಣಾರಿ ಇತರರಿದ್ದರು.

ಪ್ರೌಢಶಾಲೆಯ 11, ಪಿಯುಸಿಯ 7, ಪದವಿ ಕಾಲೇಜುಗಳ 4 ಹಾಗೂ ಸ್ನಾತಕ ಪದವಿಯಿಂದ ಒಬ್ಬ ವಿದ್ಯಾರ್ಥಿ ಪಾಲ್ಗೊಂಡಿದ್ದರು. ಲಕ್ಷಿö್ಮÃಪುತ್ರ ರಾಂಪುರ ಸ್ವಾಗತಿಸಿದರು. ಶೇಖಪ್ಪ ಜೋಗುರ, ಮೌನೇಶ ಬಡಿಗೇರ ಅತಿಥಿ ಪರಿಚಯ ಮಾಡಿದರು. ಭರಮು ಟೈಮ್ ಕೀಪರ್ ಹಾಗೂ ಮಳೆಪ್ಪ ಡಾಂಗೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net