ಎಫ್‌ಸಿಐದಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ಅಕ್ಕಿ-ಗೋಧಿ ವಿತರಣೆ

8FCI-1
ಬೆಂಗಳೂರಿನ ಭಾರತೀಯ ಆಹಾರ ನಿಗಮದ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರಸಿಂಗ್ ಭಾಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾದ ಹರಿಶಕುಮಾರ, ರಮೇಶಕುಮಾರ ಗೌತಮ್ ಹಾಗೂ ಹಣಕಾಸು ವಿಭಾಗದ ಡಿಜಿಎಂ ಉದಯ ಭರ ಇದ್ದರು.
Published on

ಬೆಂಗಳೂರು: ಭಾರತೀಯ ಆಹಾರ ನಿಗಮ ಪ್ರಾದೇಶಿಕ ಕಚೇರಿಯ ಮೂಲಕ ಪ್ರತಿ ವಾರ ಇ-ಹರಾಜಿನ ಮೂಲಕ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಸಗಟು ದರದಲ್ಲಿ ಖಾಸಗಿ ಖರೀದಿದಾರರಿಗೆ ಗೋಧಿ ಮತ್ತು ಅಕ್ಕಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಸಲಾಗುತ್ತಿದೆ ಎಂದು ಭಾರತೀಯ ಆಹಾರ ನಿಗಮದ ಪ್ರಧಾನ ವ್ಯವಸ್ಥಾಪಕ ಭೂಪೇಂದ್ರಸಿಂಗ್ ಭಾಟಿ ಹೇಳಿದರು.
ಮಂಗಳವಾರ ಎ್ಸಿಐ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಣ್ಣ ಹಾಗೂ ಮಧ್ಯಮ ವರ್ತಕರಿಗೆ(ಹಿಟ್ಟಿನ ಗಿರಣಿಗಳ ಮಾಲೀಕರಿಗೂ) 10 ಮೆ.ಟನ್‌ದಿಂದ 100 ಮೆ.ಟನ್ ವರೆಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ ಗೋಧಿ ಮತ್ತು ಅಕ್ಕಿಯ ದರಗಳನ್ನು ಹತೋಟಿ ಮಾಡುವುದಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನಲೆಯಲ್ಲಿ ಎಫ್‌ಸಿಐ ಈ ನಿರ್ಧಾರ ಕೈಗೊಂಡಿದೆ. ಇದು ಡಿಸೆಂಬರ್ 31, 2023ರವರೆಗೆ ನೀಡಲಾಗುತ್ತಿದೆ. ಗೋಧಿಯ ಮೀಸಲು ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ 2,150 ರೂ. ಹಾಗೂ ಅಕ್ಕಿಯ ಮೀಸಲು ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ರೂ 3,100 ರೂ. ಕ್ಕೆ ನಿಗದಿಪಡಿಸಲಾಗಿದೆ ಎಂದು ಭಾಟಿ ಹೇಳಿದರು. ಕಳೆದ ಎರಡು ತಿಂಗಳಲ್ಲಿ (ಜೂನ್-ಜುಲೈ)ನಡೆಸಲಾದ ಇ-ಹರಾಜಿನಲ್ಲಿ 60650 ಮೆ.ಟನ್ ಪೈಕಿ 26430 ಮೆ.ಟನ್ ಗೋಧಿಯನ್ನು ಮಾರಾಟ ಮಾಡಲಾಗಿದೆ. ಜುಲೈ 2023ರ ಅಂತ್ಯಕ್ಕೆ ರಾಜ್ಯದಲ್ಲಿ 7,02,647. ಮೆ.ಟನ್ ಅಕ್ಕಿ ಮತ್ತು 62,880 ಗೋಧಿಯ ಸಂಗ್ರಹವಿದೆ ಎಂದರು. ಕಳೆದ ಒಂದು ವರ್ಷದಿಂದ 18,61,005 ಮೆ.ಟನ್‌ಗಳಷ್ಟು ಅಕ್ಕಿಯನ್ನು ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ಎಫ್‌ಸಿಐನ ವಿಭಾಗೀಯ ಕಚೇರಿಗಳ ಅಡಿಯಲ್ಲಿ ಡಿಪೋಗಳಿಂದ ವಿತರಿಸಲಾಗಿದೆ ಎಂದು ಭಾಟೀ ಹೇಳಿದರು. ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ 26742 ಮೆ.ಟನ್, ತಮಿಳುನಾಡಿಗೆ 2770 ಮೆ,ಟನ್ ಹಾಗೂ ಕೇರಳಕ್ಕೆ 991 ಮೆ.ಟನ್ ರಾಗಿಯನ್ನು ಪೂರೈಸಲಾಗಿದೆ ಎಂದರು. ರಾಜ್ಯಾದ್ಯಂತವಿರುವ ಎಲ್ಲ ಎಫ್‌ಸಿಐ ಸ್ವಾಮ್ಯದ ಗೋಡೌನ್‌ಗಳನ್ನು ಆಧುನೀಕರಣಗೊಳಿಸಿ, ತೂಕ ಮತ್ತು ಗುಣಮಟ್ಟ ಪರಿಶೀಲನೆಗಾಗಿ ಅಗತ್ಯ ಮೂಲಸೌಕರ್ಯ ಸೌಕರ್ಯಗಳೊಂದಿಗೆ ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆಗಾಗಿ ಎಲ್ಲಾ ಸುರಕ್ಷಿತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಭೂಪೇಂದ್ರ ಸಿಂಗ್ ಭಾಟಿ ಹೇಳಿದರು. ಈ ಸಂದರ್ಭದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾದ ಹರಿಶಕುಮಾರ, ರಮೇಶಕುಮಾರ ಗೌತಮ್ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ(ಹಣಕಾಸು)ಉದಯ ಭರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net