ಸ್ಪರ್ಧಾತ್ಮಕ ಪರೀಕ್ಷೆಗೆ ಸಾವಿರಾರು ಮಂದಿ ಗೈರು

Exam
Published on

ಚಿತ್ರದುರ್ಗ: ಗೆಜೆಟೆಡ್ ಪ್ರೊಬೆಷನರ್ಸ್ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಜಿಲ್ಲಾ ಕೇಂದ್ರ ಚಿತ್ರದುರ್ಗದ 24 ಪರೀಕ್ಷಾ ಕೇಂದ್ರಗಳಲ್ಲಿ ಬರೆಯಲು ಒಟ್ಟು 8,098 ಮಂದಿ ನೋಂದಾಯಿಸಿದ್ದು, ಮಂಗಳವಾರ ಸಾವಿರಾರು ಮಂದಿ ಗೈರಾಗಿದ್ದರು.

ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆದ ಪರೀಕ್ಷೆ ಸುಗಮ, ಶಾಂತಿಯುತವಾಗಿ ನೆರವೇರಿತು. ಈ ಬಾರಿ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಹಾಗೂ ಮೊಬೈಲ್ ಜಾಮರ್ ಅಳವಡಿಸಲಾಗಿತ್ತು. ಅಲ್ಲದೆ, ಅಕ್ರಮ ತಡೆಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮವಹಿಸಲಾಗಿತ್ತು.

ಪತ್ರಿಕೆ 1ರ ಪರೀಕ್ಷೆಗೆ 5,117 ಅಭ್ಯರ್ಥಿಗಳು ಹಾಜರಾಗಿ, 2,981 ಮಂದಿ ಗೈರಾಗಿದ್ದರು. ಪತ್ರಿಕೆ 2ರಲ್ಲಿ 5,087 ಮಂದಿ ಹಾಜರಾಗಿ, 3,011 ಅಭ್ಯರ್ಥಿಗಳು ಗೈರಾಗಿದ್ದರು.

ಪರೀಕ್ಷೆಗೆ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ ಹಿನ್ನಲೆಯಲ್ಲಿ ಅಭ್ಯರ್ಥಿಗಳಿಗೆ ಗೊಂದಲವಾಗದಂತೆ ಕೇಂದ್ರಗಳಲ್ಲಿ ಮಾಹಿತಿ, ಸೂಚನಾ ಫಲಕ ಅಳವಡಿಸಲಾಗಿತ್ತು. ಭದ್ರತೆಗಾಗಿ ಕೇಂದ್ರಗಳ ಸುತ್ತ, ಮಾರ್ಗಾಧಿಕಾರಿಗಳ ತಂಡಕ್ಕೆ ಪೊಲೀಸರನ್ನು ನೇಮಿಸಲಾಗಿತ್ತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net