ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ

BASAVARAJ DESHMUKH-1
Published on

ಕಲಬುರಗಿ: ಜಿಲ್ಲಾ ವೀರಶೈವ ಸಮಾಜದಿಂದ ನಗರದ ರಿಂಗ್ ರಸ್ತೆಯಲ್ಲಿರುವ ಜಾಗೃತಿ ಕಾಲನಿಯಲ್ಲಿನ ಪ್ರೌಢ ದೇವರಾಯ ಪಿಯು ಕಾಲೇಜಿನ ಕಟ್ಟಡದಲ್ಲಿ ಈ ಭಾಗದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಅಲ್ಲಮ ಪ್ರಭು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ವೀರಶೈವ ಸಮಾಜದ ಗೌರವಾಧ್ಯಕ್ಷ ಬಸವರಾಜ ದೇಶಮುಖ ತಿಳಿಸಿದರು.
ಕೇಂದ್ರಕ್ಕಾಗಿ ಮೂರು ಕೋಣೆಗಳನ್ನು ಹೊಸದಾಗಿ ನಿರ್ಮಿಸಿದ್ದು, ಲೈಬ್ರರಿ ಕಂ ರೀಡಿಂಗ್ ಕೋಣೆ, ತರಗತಿ ಕೋಣೆ, ಕಚೇರಿ ಕೋಣೆಯನ್ನು ನಿರ್ಮಿಸಲಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಶೇ.೭೫, ಅನ್ಯ ಸಮುದಾಯದ ಶೇ.೨೫ ಸ್ಪರ್ಧಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಮಾತನಾಡಿ, ಲಾಭಾಕಾಂಕ್ಷೆ ಇಲ್ಲದೆ ಈ ಭಾಗದ ನಿರುದ್ಯೋಗಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಆರಂಭಿಸುತ್ತಿದ್ದು, ಒಂದು ಬ್ಯಾಚ್‌ನಲ್ಲಿ ೮೦ ವಿದ್ಯಾರ್ಥಿಗಳಿಗೆ ಅವಕಾಶವಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ಧಾರವಾಡಕ್ಕೆ ತರಬೇತಿಗೆ ಹೋಗುವುದು ತಪ್ಪಿಸಲು ಈ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.
ಬೆAಗಳೂರು, ಹೈದರಾಬಾದ್, ದೆಹಲಿ, ಗುಲ್ಬರ್ಗದಲ್ಲಿನ ನಿವೃತ್ತ ಅನುಭವಿ ಉಪನ್ಯಾಸಕರಿಂದ ಆನ್‌ಲೈನ್, ಆಫ್‌ಲೈನ್ ತರಗತಿಗಳು ನಡೆಯಲಿವೆ. ಪ್ರವೇಶ ಪರೀಕ್ಷೆ ತೆಗೆದುಕೊಂಡು, ಸೂಕ್ತ ಪರಿಶೀಲನೆ ನಡೆಸಿ ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಹೇಳಿದರು.
ಇಂದು ಪೂಜೆ: ಮೂರು ಕೋಣೆಗಳ ಉದ್ಘಾಟನಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ೧೦ಗಂಟೆಗೆ ಉದ್ಘಾಟನೆ ನಡೆಯಲಿದೆ. ಎಲ್ಲ ಫರ್ನಿಚರ್ ಕೆಲಸಗಳು ಪೂರ್ಣಗೊಂಡ ನಂತರ ಶೀಘ್ರದಲ್ಲಿ ತರಗತಿಗಳು ಆರಂಭಿಸಲಾಗುವುದು ಎಂದು ಅರುಣಕುಮಾರ ಪಾಟೀಲ್ ತಿಳಿಸಿದರು.
ಎಂ.ಎನ್.ಪಾಟೀಲ್, ಡಾ.ಶ್ರೀಶೈಲ ಘೂಳಿ, ಸಂಜೀವ ತಿರಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net