ಸ್ಪರ್ಧಾ ಸಾರಥಿ ಕಾರ್ಯಾಗಾರ

23 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಪರ್ಧಾ ಅರಿವು ಸಂಸ್ಥೆಯು ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಆ. 27ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಸಪ್ತಾಪುರದ ಲಿಂಗಾಯತ ಭವನದಲ್ಲಿ ‘ಸ್ಪರ್ಧಾ ಸಾರಥಿ’ ಕಾರ್ಯಾಗಾರ ಏರ್ಪಡಿಸಿದೆ.
ಕಾರ್ಯಾಗಾರವನ್ನು ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಉದ್ಘಾಟಿಸುವರು. ಅತಿಥಿಗಳಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕ ಭೈರಪ್ಪ (ಐಆರ್‌ಎಸ್), ಕೆಎಎಸ್ ಅಧಿಕಾರಿ ಹರೀಶ ಜಿ.ಕೆ., ಡಿವೈಎಸ್ಪಿ ಗೌರವ ಆಗಮಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಎಚ್. ಪಾಟೀಲ, ಅಶೋಕ ಮಿರ್ಜಿ, ಗರಣಿ ಕೃಷ್ಣಮೂರ್ತಿ ಆಗಮಿಸುವರು. ಸ್ಪರ್ಧಾ ಅರಿವು ಸಿಇಒ ರಾಜಶೇಖರ ಬಿಸನಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಾಗಾರದ ಜತೆಗೆ 500 ಅಂಗವಿಕಲರಿಗೆ ಮತ್ತು ಬಡ ವಿದ್ಯಾರ್ಥಿನಿಯರಿಗೆ ಸ್ಪರ್ಧಾ ಅರಿವು ಮಾಸ ಪತ್ರಿಕೆಯ ಒಂದು ವರ್ಷದ ಆನ್‌ಲೈನ್ ಚಂದಾದಾರಿಕೆಯ ನೋಂದಣಿ ನಡೆಯಲಿದೆ. ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳ ತಂತ್ರಗಳು ಹಾಗೂ ಯಶಸ್ಸಿನ ಸೂತ್ರಗಳು ಸೇರಿ ಇತರ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಮಗ್ರ ಮಾಹಿತಿ ನೀಡಲಿದ್ದಾರೆ.
ಕಾರ್ಯಾಗಾರದ ನೋಂದಣಿ ಉಚಿತವಾಗಿದೆ. ವಿದ್ಯಾರ್ಥಿಗಳು ಮೊ. 9008496009 ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net