ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Sparde
Published on

ಚಿತ್ರದುರ್ಗ: ಕೋಟೆ ಮುಂಭಾಗದ ಮಹಾರಾಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಹಕಾರ ಕುರಿತು ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.

ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಕಾಲೇಜಿನಿಂದ ಸ್ಪರ್ಧೆ ಆಯೋಜಿಸಲಾಗಿತ್ತು.

ಚರ್ಚಾ ಸ್ಪರ್ಧೆ: ಬಿ.ಟಿ. ಸೌಂದರ್ಯ, ಪವನ-ಪ್ರಥಮ, ಕೆ.ಎಸ್.ಅನುಪಮಾ, ಎಚ್.ತನುಜಾ-ದ್ವಿತೀಯ. ಪ್ರಬಂಧ ಸ್ಪರ್ಧೆ: ಎಂ.ತನು-ಪ್ರಥಮ, ಆಲಿಯಾ ಪರ್ವಿನಾ-ದ್ವಿತೀಯ, ಟಿ.ನಯನಾಗೆ ತೃತೀಯ ಸ್ಥಾನ ಲಭಿಸಿತು.

ಕಾಲೇಜಿನ ಪ್ರಾಂಶುಪಾಲ ಟಿ.ಜಯಣ್ಣ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಜಿಂಕಲು ಬಸವರಾಜ್, ಎಚ್.ಎನ್.ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕರಾದ ಆರ್.ಚನ್ನಪ್ಪ ಕೋಟೆಹಾಳ್, ಎ.ಎನ್. ರಾಜಶೇಖರ್, ಮೌಲ್ಯಮಾಪಕರಾದ ಎಸ್.ಪಿ.ರವಿಕುಮಾರ್, ಟಿ.ಆರ್.ವೆಂಕಟೇಶ್, ತೀರ್ಪುಗಾರರಾದ ಎಸ್.ಮಾಲತಿ, ಎಸ್.ಉಮಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net