ಸ್ಪರ್ಧಾ ಮನೋಭಾವದ ಪಾಲ್ಗೊಳ್ಳುವಿಕೆ : ಕಲೋತ್ಸವದಲ್ಲಿ ಲೇಖಕಿ ಪ್ರಸನ್ನಾ ಸಲಹೆ

dharmatadka
Published on

ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಪ್ರೌಢಶಾಲಾ ವಿಭಾಗದ ಕಲೋತ್ಸವ ನಿನ್ನೆ ನಡೆಯಿತು.

ಲೇಖಕಿ ಪ್ರಸನ್ನಾ ವಿ.ಚೆಕ್ಕೆಮನೆ ಮುಖ್ಯ ಅತಿಥಿಯಾಗಿ ಮಾತನಾಡಿ, ಕಲೋತ್ಸವ ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆ ಹೊರತರುವ ಉತ್ತಮ ವೇದಿಕೆಯಾಗಿದ್ದು, ಎಲ್ಲರೂ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

ಪಿ.ಟಿ.ಎ. ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲ್ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಶಂಕರ ನಾರಾಯಣ ಭಟ್, ಮುಖ್ಯಶಿಕ್ಷಕ ಇ.ಎಚ್.ಗೋವಿಂದ ಭಟ್, ಎಂ.ಪಿ.ಟಿ.ಎ. ಅಧ್ಯಕ್ಷೆ ದಿವ್ಯಭಾರತಿ, ನೌಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್, ಕಲೋತ್ಸವ ಸಂಚಾಲಕಿ ತುಳಸಿ ಕೆ., ಸಂಸ್ಕೃತೋತ್ಸವ ಸಂಚಾಲಕ ಶಿವನಾರಾಯಣ ಭಟ್ ಶುಭ ಹಾರೈಸಿದರು. ಉಮಾದೇವಿ ಸ್ವಾಗತಿಸಿದರು. ವಿಚೇತ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಶಿಧರ ಕೆ. ಮುಖ್ಯ ಅತಿಥಿಯ ಪರಿಚಯ ಮಾಡಿದರು. ಪ್ರಶಾಂತ ಹೊಳ್ಳ ಎನ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net