

ಹಾಸನ : ಈಗಿನ ಸ್ಪರ್ಧತ್ಮಕ ಜಗತ್ತಿನಲ್ಲಿ ಯುವ ಜನತೆ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕಾಗಿದ್ದು, ತಮ್ಮ ಜೀವನದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳವಲ್ಲಿ ಬದ್ಧರಾಗಬೇಕು ಹಾಗೂ ಪ್ರತಿಯೊಬ್ಬರಿಗೂ ಕಾನೂನು ಕಟ್ಟಳೆಗಳ ಬಗ್ಗೆ ಜ್ಞಾನ ಇರಬೇಕು ಎಂದು ಹಾಸನದ ಡಿವೈಎಸ್‌ಪಿ ಉದಯ್ ಭಾಸ್ಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿವೇಕನಂದರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ನನಸಾಗುವ ಕನಸುಗಳನ್ನು ಕಾಣಬೇಕಿದ್ದು ಹೀರಿಯರ ಬಾಳಿಗೆ ದಾರಿ ದೀಪವಾಗಬೇಕಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಂತಹ ದಿನಗಳನ್ನು ಆಚರಣೆ ಮಾಡುವುದಕ್ಕಿಂತ ತಮ್ಮ ಜೀವನದಲ್ಲಿ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಆಗ ಮಾತ್ರ ಮುಂದಿನ ಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳು ತಲುಪಲಿವೆ, ವಿದ್ಯಾಭ್ಯಾಸ ಕಾಲದಲ್ಲಿ ಬೇರೆ ವಿಚಾರಗಳಲ್ಲಿ ಭಾಗಿಯಾಗದೆ ಓದಿನ ಕಡೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್ ಮಂಜುನಾಥ್ ಮೂರ್ತಿ ಮಾತನಾಡಿ, ಕಾನೂನು ಅರಿವು ನಮಗಿಲ್ಲದಿದ್ದರೆ ಸಮಾಜದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಶಿಸ್ತು, ಸಮಯ ಪರಿಪಾಲನೆ ಅಗತ್ಯ ವಿದ್ದು ಮೋಸ, ವಂಚನೆ ಮಾಡದೆ ಉತ್ತಮ ರೀತಿಯಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಂಡು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಪ್ರಾಮುಖ್ಯತೆ ಪಡೆದುಕೊಳ್ಳುಬೇಕು . ವಿವೇಕಾನಂದರರು ಸಹ ಇದೇ ರೀತಿ ನಿಸ್ವಾರ್ಥ ಮನೋಭಾವದಿಂದ ಕಾರ್ಯ ನಿರ್ವಹಿಸಿದ್ದು ಜಗತ್ತಿಗೆ,ಯುವಕರಿಗೆ ಉತ್ತಮ ಮಾನವೀಯತೆಯನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಪ್ರದೀಪ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ಡಾ. ವಿಜಯ್ ಕುಮಾರ್ ತೀಲೆ , ಪ್ರಾಧ್ಯಾಪಕಿ ಡಾ. ಪೂರ್ಣಿಮಾ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಕೆ. ನರಸಿಂಹನ್, ಕಾಲೇಜಿನ ನೌಕರರ ಕಲ್ಯಾಣ ಸಂಘದ ಕಾರ್ಯದರ್ಶಿ ಶಿವಕುಮಾರ್, ಮೇಕಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ್ ನಾಯಕ್, ಪ್ರಾಧ್ಯಾಪಕರಾದ ಡಾ. ಇಂದೀರಾ ಬಹದ್ದೂರ್, ಡಾ. ಪೂರ್ಣೀಮಾ, ಚಂದ್ರಕಲಾ, ಪಾರ್ವತಮ್ಮ ಇತರರು ಇದ್ದರು.