ಸ್ನೇಹಿತರಿಂದಲೇ ಕೊಲೆಯಾದ ಸ್ನೇಹಿತ

Chand Saab
Published on

ಕಲಬರಗಿ: ಸ್ನೇಹಿತರು ಕೂಡಿ ಸ್ನೇಹಿತನ ಮನೆಯಲ್ಲಿಯೇ ಪರ‍್ಟಿ ಮಾಡಿ ಆತನನ್ನೆ ರ‍್ಬರವಾಗಿ ಕೊಲೆಗೈದ ಟನೆ ನಗರದ ಕುಷ್ಟರೋಗಿಗಳ ಕಾಲನಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚಾಂದ್​ಸಾಬ್​ (೩೮) ಕೊಲೆಗೀಡಾದ ವ್ಯಕ್ತಿ.

ಕುಷ್ಟರೋಗಿಗಳ ಕಾಲನಿಯಲ್ಲಿ ಒಬ್ಬನೇ ವಾಸಿಸುತ್ತಿದ್ದ ಚಾಂದ್​ಸಾಬ್​ ಪೇಟಿಂಗ್​ ಕೆಲಸ ಮಾಡುತ್ತಿದ್ದ. ಶುಕ್ರವಾರ ತನ್ನ ಮನೆಯಲ್ಲಿಯೇ ಸ್ನೇಹಿತರೊಂದಿಗೆ ಪರ‍್ಟಿ ಮಾಡಿದ್ದು, ಯಾವುದೋ ದ್ವೇಷಕ್ಕೆ ಬಟ್ಟೆ ಬಿಚ್ಚಿ, ಕಟ್ಟಿಗೆಯಿಂದ ಹೊಡೆದು ರ‍್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ. ಮೃತನ ಪತ್ನಿ, ಮಕ್ಕಳು ದೆಹಲಿಯಲ್ಲಿ ವಾಸ ಮಾಡುತ್ತಿದ್ದರಿಂದ ಚಾಂದ್​ಸಾಬ್​ ಒಬ್ಬನೇ ಇಲ್ಲಿ ವಾಸಿಸುತ್ತಿದ್ದ. ಆರ್​ಜಿ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ, ಡಿಸಿಪಿ ಕನ್ನಿಕಾ ಸಿಕ್ರಿವಾಲ್​, ಪಿಐ ಕುಬೇರ ರಾಯಮಾನೆ ಇತರರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net