ಸ್ನೇಹಿತನನ್ನು ಹತ್ಯೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೈಸೂರು ಜಿಲ್ಲಾ ನ್ಯಾಯಾಲಯ

mysoreDistCourt 4 MAR 20
Published on

ಮೈಸೂರು: ಸ್ನೇಹಿತನನ್ನು ಹತ್ಯೆಗೈದ ಅಪರಾಧಿಗೆ ನಗರದ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಎಚ್.ಡಿ.ಕೋಟೆ ತಾಲೂಕು ಕೆಂಡೆಗೌಡನಪುರದ ಕೆಂಡ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ತನ್ನ ಸ್ನೇಹಿತ ಆನಂದನನ್ನು 27 ಜೂನ್ 2016 ರಂದು ಹತ್ಯೆ ಮಾಡಿದ್ದ. ಆನಂದ ಕೆಂಡನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡು ಆನಂದನನ್ನು ಕೆಂಡ ಮಾರಕಾಸ್ತ್ರದಿಂದ ಹತ್ಯೆಗೈದಿದ್ದ.

ಈ ಕುರಿತು ಎಚ್.ಡಿ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಾಟೀಲ್‌ಮೋಹನ್ ಕುಮಾರ್ ಬೀರನಗೌಡ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಕೆಎಂಸಿ ಶಿವಶಂಕರ್ ಮೂರ್ತಿ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net