ಸ್ನೇಹಯುತ ಬದುಕಿನಿಂದ ಉತ್ತಮ ಸಮಾಜ

klb6
ಆಳಂದ ತಾಲೂಕಿನ ಧಂಗಾಪುರದಲ್ಲಿನ ಡಾ.ಅಂಬೇಡ್ಕರ್ ಮೂರ್ತಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ನಮನ ಸಲ್ಲಿಸಿದರು. ಡಾ.ಸಿದ್ರಾಮಪ್ಪ ಪಾಟೀಲ್, ಗುರುಲಿಂಗ ಜಂಗಮ ಪಾಟೀಲ್ ಇತರರಿದ್ದರು.
Published on

ಆಳಂದ: ದ್ವೇಷ ಬಿಟ್ಟು, ಸ್ನೇಹದೊಂದಿಗೆ ಬದುಕು ನಡಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದರು.

ಧಂಗಾಪುರದಲ್ಲಿ ಗ್ರಾಮಸ್ಥರಿಂದ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಘಟಕದ ಅಧ್ಯಕ್ಷನಾಗಿದ್ದು, ಜವಾಬ್ದಾರಿ ಹೆಚ್ಚಾಗಿದೆ. ಯುವಕರು ಶ್ರದ್ಧೆ, ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಹುದ್ದೆ ತಾನಾಗಿಯೇ ದೊರೆಯುತ್ತದೆ. ರಾಜಕೀಯ ಬಿಟ್ಟು ನಮ್ಮ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಾ.ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಬಸವಂತರಾವ ಮಾಲಿಪಾಟೀಲ್, ಗುರುಲಿಂಗ ಜಂಗಮ ಪಾಟೀಲ್, ಲಕ್ಷ್ಮೀಪುತ್ರ ಶೇಗಜಿ, ಗುರುಭೀಮರಾವ ಆಳಂದ, ಲಕ್ಷö್ಮಣ ನಾಟಿಕಾರ, ಪುಂಡಲಿಕ ಮೇಲಿನಕೇರಿ, ಗುಂಡಪ್ಪ ಪೂಜಾರಿ, ಅಮೃತ ಮೇಲಿನಕೇರಿ, ಕೃಷ್ಣ ಕಾಂಬಳೆ, ವಿಠ್ಠಲ ಪಟ್ಟಣ, ಕೃಷ್ಣ ಮೇಲಿನಕೆರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net