

ಚಿತ್ರದುರ್ಗ:ಮುರುಘಾಮಠ,ಸರ್ವ ಸಮುದಾಯದ ಮಠವಾಗಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನೆಹರು ನಗರದ ಮೆಕ್ಕಾ ಮಸೀದಿಯ ಹತ್ತಿರ ಶುಕ್ರವಾರ ಏರ್ಪಡಿಸಿದ್ದ ಶ್ರಾವಣ ಮಾಸದ ಮನೆ,ಮನೆಗೆ ಚಿಂತನೆ‘ನಿತ್ಯಕಲ್ಯಾಣ’ಕಾರ‌್ಯಕ್ರಮದಲ್ಲಿ ಸಂಶಯ ದೃಷ್ಟಿ ವಿ ಷಯದ ಕುರಿತು ಮಾತ ನಾಡಿದರು.
ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು.ಸಂಸಾರ,ಸ್ನೇಹದಲ್ಲಿ ನಂಬಿಕೆ ಎಂಬುದು ಮುಖ್ಯ.ನಂಬಿಕೆ ಜಾಗದಲ್ಲಿ ಸಂಶಯ ಬಂದರೆ ಸಂಸಾರ ಒಡೆದು ಹೋಗುತ್ತದೆ. ಪ್ರೀತಿ,ನಂಬಿಕೆ ಸಾಮರಸ್ಯ ಇರಬೇಕೆಂದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ,ಸಂ ತರು ನಾವೆಲ್ಲರೂ ಒಂದೇ ಎಂದಿದ್ದಾರೆ. ಶ್ರೀಗಳು ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾರ‌್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಶ್ರೀ ಇಮ್ಮಡಿ ಬಸವಕೇತೇಶ್ವರ ಸ್ವಾಮೀಜಿ,ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹಾಗೂ ಎಚ್.ವಿಜಯಕುಮಾರ್ ಮಾತನಾಡಿದರು. ನ ಗರಸಭೆ ಸದಸ್ಯ ಗೊಪ್ಪೆ ಮಂಜುನಾಥ್,ಸೈಯ ದ್‌ಅನೀಸ್,ವೀಣಾಸುರೇಶ್,ಕೆ.ಸಿ.ನಾಗರಾಜ್ ಮತ್ತಿತರರು ಇದ್ದರು. ಉಮೇಶ್‌ಪತ್ತಾರ್ ಸಂಗಡಿಗರು ಪ್ರಾರ್ಥಿಸಿದರು. ಪ್ರಕಾಶ ರಾಮನಾಯಕ್ ಸ್ವಾಗತಿಸಿ,ಪಿ.ಟಿ.ಜ್ಞಾನಮೂರ್ತಿ ನಿರೂಪಿಸಿದರು.