ಸ್ನೇಹ, ಬಾಂಧವ್ಯ ಬೆಸೆಯಲು ಕ್ರೀಡೆ ಸಹಕಾರಿ

23Kush02
Published on

ಕುಶಾಲನಗರ: ಕ್ರೀಡಾಕೂಟಗಳು ಯುವ ಜನರಲ್ಲಿ ಉತ್ತಮ ಸ್ನೇಹ ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಅಭಿಪ್ರಾಯಪಟ್ಟರು.


ಬಸವ ಜಯಂತಿ ಅಂಗವಾಗಿ ಕುಶಾಲನಗರ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಜಂಪ್ ಸ್ಮಾಷ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಷಟಲ್ ಕಾಕ್ ಪಂದ್ಯಾವಳಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.


ಪಂದ್ಯಾವಳಿಯಲ್ಲಿ ಏಳು ತಂಡಗಳ 80ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದರು. ವೃತ್ತ ನಿರೀಕ್ಷಕ ಮಹೇಶ್, ಜಂಪ್‌ಸ್ಮಾಷ್ ಕ್ರೀಡಾಂಗಣದ ಮಾಲೀಕ ಶರತ್, ಎನ್.ಕೆ.ಮೋಹನ್ ಕುಮಾರ್, ಪಿಡಿಒ ಲೋಕೇಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶೈಜನ್ ಪೀಟರ್, ಹಿರಿಯ ಆಟಗಾರ ಸತ್ಯಣ್ಣ, ಕೆ.ಎಸ್.ಮೂರ್ತಿ, ಆನಂದ್, ಅರುಣ್, ಅನೂಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net