

ಹುಬ್ಬಳ್ಳಿ: ಸದಾ ಕ್ರಿಯಾಶೀಲರಾಗಿದ್ದ ನಿವೃತ್ತ ಶಿಕ್ಷಕ, ಚಿಂತಕ ದಿ. ಎಂ.ಬಿ. ನಾತು ಅವರು ಸ್ನೇಹಿಜೀವಿಯಾಗಿದ್ದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ದಿ. ಎಂ.ಬಿ. ನಾತು ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಚಿವರು, ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ನಾತು ಅವರ ಪಾತ್ರ ಮಹತ್ವದ್ದು ಎಂದರು.
ನಾತು ಅವರು ಬ್ರಾಹ್ಮಣರಾಗಿದ್ದರೂ ಅವರ ಚಿಂತನೆಗಳು ಜಾತ್ಯತೀತವಾಗಿದ್ದವು. ಎಲ್ಲ ಸಮಾಜದ ಬಡ ವಿದ್ಯಾರ್ಥಿಗಳಿಗೆ ನಾತು ಅವರು ಹಲವಾರು ರೀತಿಯ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಕೆಲವರು ಜೀವಂತ ಇದ್ದಾಗಲೂ ಸತ್ತಂತೆ ಇರುತ್ತಾರೆ. ಆದರೆ, ಎಂ.ಬಿ. ನಾತು ಅವರಂಥವರು ಸಾವಿನ ನಂತರವೂ ಜೀವಂತ ಇರುತ್ತಾರೆ. ಸಮಾಜದಲ್ಲಿರುವ ದುರ್ಬಲರಿಗೆ ಸಹಾಯ ಮಾಡುವುದೇ ನಾತು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.
ಬ್ರಾಹ್ಮಣ ಸಮಾಜದ ಪ್ರಮುಖರಾದ ರಾಜಾ ದೇಸಾಯಿ, ಲಕ್ಷ್ಮಣರಾವ ಕುಲಕರ್ಣಿ, ಪಂ. ರವಿ ಆಚಾರ್ಯ, ಗೋವಿಂದ ಜೋಶಿ, ವಸಂತ ನಾಡಜೋಶಿ, ಎ.ಸಿ. ಗೋಪಾಲ, ಪದ್ಮಾ ಉಮರ್ಜಿ, ಉಮೇಶ ದುಶಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಇತರರಿದ್ದರು.