ಸ್ನಾನದ ದೃಶ್ಯ ಸೆರೆ ಹಿಡಿದಿದ್ದ ಆರೋಪಿ ಕಳ್ಳತನ ಪ್ರಕರಣದಲ್ಲಿ ಬಂಧನ

IMG_20210717_145055
Published on

ಮಂಗಳೂರು: ಕುತ್ತಾರಿನ ಅಪಾರ್ಟ್‌ಮೆಂಟೊಂದರ ಮನೆಯಿಂದ 24 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಕಳವುಗೈದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ ಮತ್ತು ಆತನ ಸಹೋದರ ಮೊಹಮ್ಮದ್ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪೈಕಿ ಅಬ್ದುಲ್ ಮುನೀರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜು.2 ರಂದು ಖತೀಜಾ ಮೆಹಸರ್ ಎಂಬವರ ಮನೆಯಿಂದ ಅಬ್ದುಲ್ ಮುನೀರ್ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಸಿಸಿಟಿವಿ ಕಳವು ನಡೆಸಿದ್ದಾನೆ. ಈತ ಮನೆಯೊಳಗೆ ಹೋಗಿರುವ ಕುರಿತು ಫ್ಲ್ಯಾಟ್ ಹೊರಗಡೆ ಇರುವ ಸಿಸಿಟಿವಿಯಲ್ಲಿ ದಾಖಲೆಗಳು ಸೆರೆಯಾಗಿದೆ. ಇದೇ ಮನೆಯಿಂದ 160 ಗ್ರಾಂ ಚಿನ್ನಾಭರಣ ವರ್ಷದ ಹಿಂದೆ ಮೊಹಮ್ಮದ್ ಸಿರಾಜ್ ಕಳವು ಮಾಡಿದ್ದ. ಸಹೋದರರಿಬ್ಬರು ಕಳವು ನಡೆಸಿದ ಸೊತ್ತುಗಳನ್ನು ಮಾರಾಟ ಮಾಡಿ ಬೆಲೆಬಾಳುವ ಎರಡು ಕಾರುಗಳನ್ನು ಹೊಂದಿ ಅದರಲ್ಲಿ ಸುತ್ತಾಡುತ್ತಿರುವ ಮಾಹಿತಿಯನ್ನು ನೀಡಿದ್ದಾರೆ.
ಸ್ನಾನದ ದೃಶ್ಯ ಸೆರೆ ಹಿಡಿದು ಬಂಧಿತನಾಗಿದ್ದ ಆರೋಪಿ !
ಆರೋಪಿ ಅಬ್ದುಲ್ ಮುನೀರ್ ಜ.20 ರಂದು ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೋರ್ವರನ್ನು ನೋಡುವ ಕಾರಣವೊಡ್ಡಿ, ಅಲ್ಲೇ ಇದ್ದ ಸಂಬಂಧಿ ಮಹಿಳೆ ಸ್ನಾನ ಮಾಡುವ ವೀಡಿಯೋವನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಈ ಸಂಬಂಧ ಉಳ್ಳಾಲ ಪೊಲೀಸರಿಂದಲೇ ಬಂಧಿತನಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಾತ ಮತ್ತೆ ಕಳವು ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net