ಸ್ಥಿರ ಸರ್ಕಾರ ರಚಿಸಲಿದೆ ಕಾಂಗ್ರೆಸ್

SRP_08-01jpg
Published on

ಶ್ರೀರಂಗಪಟ್ಟಣ: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 130 ಸ್ಥಾನಗಳೊಂದಿಗೆ ಸ್ಥಿರ ಸರ್ಕಾರ ರಚಿಸುವ ಮೂಲಕ ರಾಜ್ಯದ ಸರ್ವಜನಾಂಗದ ಜನರಿಗೆ ಸಮಾನ ಆಡಳಿತ ನೀಡಲಿದ್ದು, ನಿಮ್ಮ ಕ್ಷೇತ್ರದ ಸರಳ ವ್ಯಕ್ತಿತ್ವದ ರಾಜಕಾರಣಿ ರಮೇಶ ಬಂಡಿಸಿದ್ದೇಗೌಡ ಅವರನ್ನು ಗೆಲ್ಲಿಸಿಕೊಳ್ಳಿ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಕರೆ ನೀಡಿದರು.


ತಾಲೂಕಿನ ಕೂಡಲಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಕೆ.ಶೆಟ್ಟಹಳ್ಳಿ ಹೋಬಳಿಯ ಜೆಡಿಎಸ್ ಪಕ್ಷದ ಹಲವು ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಜೆಡಿಎಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಾವುಗಳು ಯಾವುದೇ ದ್ವೇಷಸಾಧಿಸುವ ಮನೋಭಾವ ಹೊಂದಿಲ್ಲ. ಅವರ ಬಗ್ಗೆ ಮಾತನಾಡುವ ಶಕ್ತಿ ನಮಗಿಲ್ಲ. ಹೀಗಾಗಿ ನಾವು ನಮ್ಮ ಕ್ಷೇತ್ರ ಮತ್ತು ನಮ್ಮ ಜನರ ಬಗ್ಗೆ ಚಿಂತಿಸುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮನೆಯ ಯಜಮಾನಿಗೆ 2 ಸಾವಿರ ಗೃಹಲಕ್ಷ್ಮೀ ಬಾಂಡ್, 200 ಯೂನಿಟ್ ಉಚಿತ ವಿದ್ಯುತ್, ಪದವಿಧರ ನಿರುದ್ಯೋಗಿಗಳಿಗೆ 3 ಸಾವಿರ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ಪ್ರೋತ್ಸಾಹ ಧನ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.


ಗ್ರಾಪಂ ಮಾಜಿ ಅಧ್ಯಕ್ಷ ಆದಿಶೇಷ, ಮುಖಂಡರಾದ ಕೆ.ಸಿ.ಸುಬ್ರಮಣ್ಯ, ತಮ್ಮೇಗೌಡ, ನೆಲಮನೆ ಮಧು, ಅನೀಲ್ ಕುಮಾರ್, ಕೋಡಿಶೆಟ್ಟಿಪುರ ಕೆಂಚೇಗೌಡ, ಜಕ್ಕನಹಳ್ಳಿ ಬಾಲು, ಶಿವರಾಮು, ರಾಂಪುರ ಮೋಹನ್, ದರಸಗುಪ್ಪೆ ಗಿರೀಶ್, ಬಾಬುರಾಯನಕೊಪ್ಪಲು ಸಂದೇಶ್ ಸೇರಿದಂತೆ 80ಕ್ಕೂ ಹೆಚ್ಚು ಜನರು ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net