

ಬೆಂಗಳೂರು: ಕರ್ನಾಟಕದೆಲ್ಲೆಡೆ ಹಬ್ಬುತ್ತಿರುವ ಕರೊನಾ ಸೋಂಕು 3ನೇ ಹಂತವಾದ ಸಮುದಾಯಕ್ಕೆ ಹರಡುವ ಆತಂಕ ಶುರುವಾಗಿದೆ. ದಿನನಿತ್ಯ 1ರಿಂದ 2ರಂತೆ ಪತ್ತೆಯಾಗುತ್ತಿದ್ದ ಪ್ರಕರಣಗಳು ಈಗ 8,9ಕ್ಕೆ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಜನರನ್ನು ಮನೆಯಿಂದ ಹೊರಗೆ ಬರದಂತೆ ಮಾಡಲು ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಕರೊನಾದಿಂದಾಗಿ ಮೂವರು ಸಾವಿಗೀಡಾಗಿದ್ದರೆ, ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಜನತೆ ಉಡಾಫೆ ಬಿಟ್ಟು ಮನೆಯಲ್ಲಿದ್ದರಷ್ಟೇ ಈ ಮಹಾಮಾರಿಗೆ ಅಂಕೆ ಹಾಕಬಹುದಾಗಿದೆ. ಕರೊನಾ ಮಟ್ಟಹಾಕಲು ಹಾಗೂ ಸೋಂಕನ್ನು ನಿಯಂತ್ರಿಸಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿವೆ ಒಂದಷ್ಟು ಮಾಹಿತಿ.
ಸ್ವಚ್ಛತೆ ಇರಲಿ
ಜನರೇನು ಮಾಡಬೇಕು?
ವೈರಸ್ ಹೇಗೆ ಹರಡುತ್ತೆ?