

ಕಲಬುರಗಿ: ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಅವಿರೋಧವಾಗಿ ಬುಧವಾರ ಆಯ್ಕೆಯಾಗಿದ್ದು, ಸಮಿತಿ ಸದಸ್ಯರ ಸ್ಥಾನಗಳಿಗೂ ಎಲ್ಲ ಪಕ್ಷಗಳ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಮಹಾಪೌರ ಯಲ್ಲಪ್ಪ ನಾಯ್ಕೋಡಿ ಅಧ್ಯಕ್ಷತೆಯಲ್ಲಿ ನಗರದ ಟೌನ್ ಹಾಲ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಅಧ್ಯಕ್ಷ ಸ್ಥಾನಕ್ಕೆ ಮತ್ತು ಸದಸ್ಯರ ಸ್ಥಾನಕ್ಕೆ ತಲಾ ಒಂದೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.
ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ: ಫರ್ವಿನ್ ಬೇಗಂ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಎಂಡಿ ಇಮ್ರಾನ್, ನಜ್ಮಾಬೇಗಂ, ರೇಣುಕಾ ಪರಶುರಾಮ, ಅರ್ಚನಾ ಪಾಟೀಲ್, ಯಂಕಮ್ಮ ಗುತ್ತೇದಾರ್, ಮಲ್ಲು ಉದನೂರ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಸಚಿನ ಶಿರವಾಳ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಪುತಲಿ ಬೇಗಂ, ಲತಾ ಆರ್., ಫರ್ಹನಾಜ್, ಶೋಭಾ ಜಿ, ಹೊನ್ನಮ್ಮ, ವಿಜಯಲಕ್ಷಿö್ಮÃ ಆಯ್ಕೆಯಾದರು.
ಲೆಕ್ಕ ಸ್ಥಾಯಿ ಸಮಿತಿ: ಇರ್ಫಾನಾ ಪರವೀನ್ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಮೊಹ್ಮದ್ ಹಮೀದ್, ಅನುಪಮಾ ಕಮಕನೂರ, ನಿಂಗಮ್ಮ ಕಟ್ಟಿಮನಿ, ಮೇಘನಾ ಕಳಸ್ಕರ್, ಸಚಿನ ಹೊನ್ನ, ಶಾಂತಾಬಾಯಿ ಆಯ್ಕೆಯಾದರು.
ನಗರ ಯೋಜನೆ ಮತ್ತು ಅಭಿವೃದ್ಧಿ ಸಮಿತಿ: ಮಹ್ಮದ್ ಅಜಿಮೋದ್ದೀನ್ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಮೊಹ್ಮದ್ ಖಾನ್, ವರ್ಷಾ ಜಾನೆ, ಸೈಯೀದಾ ನಸ್ರೀನ್, ಸುನೀಲ ಮುಚ್ಚಟ್ಟಿ, ಗಂಗಮ್ಮ ಬಿ, ರೇಣುಕಾ ಗುಮ್ಮಟ್ಟ ಆಯ್ಕೆಯಾದರು. ಪ್ರತಿ ಸ್ಥಾನಕ್ಕೂ ಒಬ್ಬೊಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಎಲ್ಲರದ್ದು ಅವಿರೋಧವಾಗಿ ಆಯ್ಕೆಯಾಯಿತು.
ಜು.೩೦ರಂದು ನಡೆದಿದ್ದ ಮಹಾನಗರ ಪಾಲಿಕೆಯ ೨೨ನೇ ಅವಧಿಯ ಮೇಯರ್ ಚುನಾವಣೆಯಲ್ಲಿ ಯಲ್ಲಪ್ಪ ನಾಯ್ಕೋಡಿ ಮೇಯರ್ ಆಗಿ, ಉಪ ಮೇಯರ್ ಆಗಿ ಹೀನಾ ರೆಹೆಮಾನ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಸ್ಥಾಯಿ ಸಮಿತಿಯಲ್ಲೂ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ. ನೂತನ ಅಧ್ಯಕ್ಷರನ್ನು ಬೆಂಬಲಿಗರು, ಹಿತೈಷಿಗಳು ಸನ್ಮಾನಿಸಿ, ಸಿಹಿ ತಿನಿಸಿ ಸಂಭ್ರಮಿಸಿದರು.