ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಮಾಡಿ

31 ydg 04
Published on

ಯಾದಗಿರಿ: ಹಿಂದಿನ ಸಾಮಾನ್ಯ ಸಭೆಗಳಿಗಿಂತಲೂ ಗುರುವಾರದ ನಗರಸಭೆ ಸದಸ್ಯರ ಸಾಮಾನ್ಯ ಸಭೆ ಗರಮಾಗರಂ ಚರ್ಚೆಗೆ ವೇದಿಕೆ ಒದಗಿಸಿಕೊಟ್ಟಿತು.

ಅಧ್ಯಕ್ಷೆ ಲಲಿತಾ ಅನಪುರ ಅಧ್ಯP್ಷÀತೆಯಲ್ಲಿ ಬೆಳಗ್ಗೆ ೧೧.೩೦ಕ್ಕೆ ಸಭೆ ಶುರುವಾಯಿತು. ನಿಗದಿಪಡಿಸಿದ ಮತ್ತು ಮಂಡಿಸಬೇಕಾದ ೧೭ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಅಧ್ಯP್ಷÀರು ಅನುಮತಿ ನೀಡುತ್ತಿದ್ದಂತೆ ಎದ್ದು ನಿಂತ ಮಾಜಿ ಅಧ್ಯP್ಷÀರಾದ ಹಾಲಿ ಸದಸ್ಯ ಸುರೇಶ ಅಂಬಿಗೇರ, ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯP್ಷÀರ ನೇಮಕ ಮಾಡಿದ ಬಳಿಕವೇ ಸಭೆ ಮುಂದುವರಿಸುವAತೆ ಪಟ್ಟು ಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಇನ್ನೊಬ್ಬ ಮಾಜಿ ಅಧ್ಯP್ಷÀ ವಿಲಾಸ್ ಪಾಟೀಲï ಇದು ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದು, ಮೊದಲು ಆ ಕೆಲಸ ಆಗಬೇಕು ಎಂದು ಹೇಳಿದರು.

ಆಗ ಕಾಂಗ್ರೆಸ್‌ನ ವೆಂಕಟರಡ್ಡಿ ಹೊನಕೇರಿ ಮತ್ತು ಚನ್ನಕೇಶವ ಬಾಣತಿಹಾಳ ಅಜಂಡಾದAತೆ ಸಭೆ ನಡೆಯಲಿ. ನಗರದ ಸಮಸ್ಯೆ ಬಗ್ಗೆ ಚರ್ಚೆ ನಡೆದರೆ ಸಭೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಹಣಮಂತ ನಾಯಕ ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಅಧ್ಯಕ್ಷೆ ಅನಪುರ, ಸಮಿತಿಗಳಿಗೆ ಅಧ್ಯಕ್ಷರ ನೇಮಕ ಈಗ ಮಾಡಲು ಆಗುವುದಿಲ್ಲ. ಅದಕ್ಕಾಗಿ ನೋಟಿಸ್ ನೀಡಿ ಮೂರು ದಿನ ನಂತರ ಮಾಡುವುದಾಗಿ ಹೇಳಿದರು.

ಆದರೂ ಪಟ್ಟು ಬಿಡದ ಸುರೇಶ, ವಿಲಾಸ್, ಅಂಬಯ್ಯ ಶಾಬಾದಿ ಹಾಗೂ ಪ್ರಭಾವತಿ ಕಲಾಲï ಈಗಲೇ ಮಾಡಿ ಎಂದರು. ಗರಂ ಆದ ಅಧ್ಯP್ಷÀರು ಯಾವ ಕಾರಣಕ್ಕೂ ಕಾನೂನು ಮಿರಿ ಮಾಡುವುದಿಲ್ಲ ಎಂದರು. ಈ ವೇಳೆ ಮಾತನಾಡಿದ ಬಿಜೆಪಿಯ ಹಣಮಂತ ಇಟಗಿ, ಸಭೆಗೂ ಮುಂಚೆ ಈ ಬಗ್ಗೆ ಅಧ್ಯP್ಷÀರು ಚರ್ಚೆ ಮಾಡಿz್ದÁರೆ. ಮೀಟಿಂಗ್ ನಂತರ ಮಾಡೋಣ ಎಂದು ಹೇಳಿದರು. ಆದರೂ ಅದೇ ವಿಷಯ ಪ್ರಸ್ತಾಪಿಸಿದಾಗ ಅಧ್ಯP್ಷÀರು ಇಂದಿನ ಸಭೆಯ ವಿಷಯಗಳ ಚರ್ಚೆಗೆ ಮುಂದಾದರು.

ನಗರಸಭೆ ವ್ಯಾಪ್ತಿಯ ವಾಣಿಜ್ಯ ತೆರಿಗೆ ಬೇಡಿಕೆ ಸದ್ಯ ಶೇ.೨.೫ ಇದ್ದು, ಶೇ.೧.೯ಗೆ ಇಳಿಕೆ ಮಾಡಬೇಕು ಎಂಬ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ಇಳಿಕೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಅನೇಕರು ಪP್ಷÀಭೇದ ಮರೆತು ಚರ್ಚೆ ಮಾಡಿದಾಗ ಮಧ್ಯಪ್ರವೇಶಿಸಿದ ಪೌರಾಯುಕ್ತ ಉಮೇಶ ಚವ್ಹಾಣ್, ಜಿ¯್ಲÁಧಿಕಾರಿಗಳ ನೇತೃತ್ವದಲ್ಲಿ ಕರೆದಿದ್ದ ಸಭೆಯ ನಿರ್ಣಯ ಓದಿ ಹೇಳಿದರು. ನಗರದಲ್ಲಿ ೪೦ ಸಾವಿರ ಆಸ್ತಿಗಳಿದ್ದು, ನಗರಸಭೆಗೆ ೪.೨೦ ಕೋಟಿ ರೂ. ತೆರಿಗೆ ಬರುತ್ತಿದೆ. ಕಡಿಮೆ ಮಾಡಿದರೆ ೩ ಕೋಟಿ ರೂ. ಅಷ್ಟೇ ಸಂಗ್ರಹವಾಗುತ್ತದೆ. ಹೀಗಾಗಿ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಹೇಳಿದಾಗ, ಸಂಬAಧಿತ ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆದು ಒಂದು ನಿರ್ಧಾರಕ್ಕೆ ಬರೋಣ ಎಂಬ ಮಾತಿನೊಂದಿಗೆ ಚರ್ಚೆಗೆ ತೆರೆ ಎಳೆಯಲಾಯಿತು.

ನಗರದ ಆಶ್ರಯ ಬಡಾವಣೆಗೆ ಸಂಬAಧಿಸಿದ ಸರ್ವೇ ನಂ. ೧೧ ಮತ್ತು ೧೫೧ರಲ್ಲಿ ನಿವೇಶನ ಹರಾಜು ಪ್ರಕ್ರಿಯೆ ಅಕ್ರಮ ಮತ್ತು ನಕಲಿ ದಾಖಲೆಗಳ ಬಗ್ಗೆ ಸುದೀರ್ಘ ಚರ್ಚೆಗೆ ಅನುವು ಮಾಡಿಕೊಟ್ಟಿತು. ಸುಮಾರು ಹೊತ್ತು ಅನೇಕರು ಈ ಬಗ್ಗೆ ಅವಲೋಕನ ಮಾಡಿ ಮಾತನಾಡಿದರು. ಅಲ್ಲಿ ಈಗಾಗಲೇ ಅಕ್ರಮವಾಗಿ ನಿರ್ಮಾಣಗೊಂಡ ಮನೆಗಳನ್ನು ನೆಲಸಮ ಮಾಡಬೇಕೇ, ನ್ಯಾಯಲಯದ ಮೊರೆ ಹೋಗಬೇಕೆ ಅಥವಾ ಅಲ್ಲಿನ ದರದಂತೆ ಹಣ ಪಡೆದು ದಾಖಲೆ ಮಾಡಿಕೊಡಬೇಕೇ ಹೀಗೆ ಅನೇಕ ವಿಚಾರಗಳ ಚರ್ಚೆ ಬಳಿಕ ಕೊನೆಗೆ ಪೌರಾಡಳಿತ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಯಿತು. ಕೆಲವರು ಆಶ್ರಯ ಬಡಾವಣೆಗಳಲ್ಲಿ ನಡೆದಿರುವ ಅಕ್ರಮದ ಬಗ್ಗೆ ಎಳೆಎಳೆಯಾಗಿ ಚರ್ಚಿಸಿದ್ದಲ್ಲದೆ ನಕಲಿ ದಾಖಲೆ ಸ್ಷಷ್ಟಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಚಾಮಾ ಲೇಔಟ್‌ಗೆ ಹೊಂದಿಕೊAಡಿರುವ ಸರ್ವೇ ನಂ.೭೮೭ರ ೫.೩೯ ಎಕರೆ ಜಾಗದ ಬಗ್ಗೆ ಆಡಳಿತಾರೂಢ ಬಿಜೆಪಿ, ಪೌರಾಯುಕ್ತ ಮತ್ತು ಕೆಲ ಕಾಂಗ್ರೆಸ್ ಸದಸ್ಯರ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಅಧ್ಯಕ್ಷೆ ಲಲಿತಾ ಅನಪುರ ಈ ವಿಷಯ ಪ್ರಸ್ತಾಪಿಸುತ್ತಲೇ ಈ ಸ್ಥಳಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವಿಲಾಸ್ ಪಾಟೀಲï, ಪ್ರಭಾವತಿ ಕಲಾಲï, ಅಂಬಯ್ಯ ಶಾಬಾದಿ, ದಾಸನಕೇರಿ ಇತರರು ಹೇಳಿದರಲ್ಲದೆ ಅದರ ಪ್ರತಿ ತೋರಿಸಿ ಈ ಬಗ್ಗೆ ಚರ್ಚೆ ಬೇಡ ಎಂದರು. ಮಧ್ಯಪ್ರವೇಶಿಸಿದ ಅಧ್ಯಕ್ಷರು ಆ ಪ್ರತಿಯನ್ನು ನಗರಸಭೆ ಕಾನೂನು ಸಲಹೆಗಾರರಿಂದ ಓದಿಸಿ ಸ್ಪಷ್ಟನೆ ಬಯಸಿದರು. ಆಗ ರಂಗಮAದಿರಕ್ಕೆ ಸೇರಿದ್ದ ನಗರಸಭೆ ಹೆಸರಿನಲ್ಲಿರುವ ಮೂರು ಎಕರೆ ಭೂಮಿಗೆ ತಡೆಯಾಜ್ಞೆ ಸಿಕ್ಕಿರಬಹುದು. ಆದರೆ ಉಳಿದ ಎರಡು ಎಕರೆಗಲ್ಲ. ಅಲ್ಲಿ ರಾಜ್ಯ ಹೆz್ದÁರಿ ರಸ್ತೆ ವಿಂಗಡಣೆ ವೇಳೆ ಮನೆಗಳನ್ನು ಕಳೆದುಕೊಂಡಿರುವ ೨೮ ಫಲಾನುಭವಿಗಳಿಗೆ ನಿವೇಶನ ಹಂಚಲು ಯಾವುದೇ ತಕರಾರು ಇಲ್ಲ ಎಂದು ಹೇಳಿದರು. ಇದಕ್ಕೆ ಬಿಜೆಪಿಯ ಅನೇಕರು ವಿರೋಧ ವ್ಯಕ್ತಪಡಿಸಿದರು. ಆಗ ಮಾತನಾಡಿದ ಕಾಂಗ್ರೆಸ್‌ನ ಚನ್ನಕೇಶವ ಬಾಣತಿಹಾಳ, ಈಗ ಇದು ಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ಯಾರನ್ನು ಪಾರ್ಟಿ ಮಾಡಿಸಿ ಹೆಸರು ಸೇರಿಸಿz್ದÁರೋ ಅವರ ಗಮನಕ್ಕೆ ಬರುವಂತೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದರು. ಆಗಲೂ ಒಪ್ಪದ ಕೆಲವರ ಮಾತಿನಿಂದ ಮತ್ತೆ ಗರಂ ಆದ ಅಧ್ಯP್ಷÀರು, ಪ್ರತಿಯೊಬ್ಬರ ವೈಯಕ್ತಿಕ ಹೇಳಿಕೆ ದಾಖಲಿಸಿ ಎಂದು ಮುಂದಿನ ವಿಷಯ ಚರ್ಚೆಗೆ ಅನುವು ಮಾಡಿಕೊಟ್ಟರು.

ಗುರುವಾರದ ಸಭೆ ಬಹಳ ಗರಂ ಆಗಿಯೇ ಮುಂದುವರಿದು ೧೦ ಕಾರ್ಮಿಕರನ್ನು ದಿನಗೂಲಿಯಂತೆ ತೆಗೆದುಕೊಳ್ಳಲು, ಬೀಡಾಡಿ ದನ ಮತ್ತು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ, ಜಿ¯್ಲÁ ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಜಾಗ ಮಂಜೂರು, ಮಂಗಳಮುಖಿಯರಿಗೆ ಉಚಿತ ನಿವೇಶನ ಸೇರಿ ೧೭ ವಿಷಯದ ಬಗ್ಗೆ ಸಂಜೆವರೆಗೂ ಚರ್ಚೆ ನಡೆಯಿತು. ಒಟ್ಟಿನಲ್ಲಿ ಈ ಸಭೆ ಕಾವೇರಿದ ವಾತಾವರಣದಲ್ಲಿಯೇ ಮುಗಿಯಿತು. ಅಮೃತ ಯೋಜನೆ, ವಿದ್ಯುತ್ ಸಮಸ್ಯೆ ಬಗ್ಗೆಯೂ ಸಂಬAಧಿತ ಅಧಿಕಾರಿಗಳ ಗಮನಕ್ಕೆ ಅಧ್ಯP್ಷÀರು, ಸದಸ್ಯರು ತಂದಾಗ ಬಗ್ಗೆ ಸೂಕ್ತ ಕ್ರಮದ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net