

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ನಾನಿಲ್ಲಿಗೆ ಬಂದಿದ್ದು ಹೂಮಾಲೆ, ಶಾಲು ಹಾಕಿಸಿಕೊಳ್ಳಲು ಅಲ್ಲ. ಪಕ್ಷದಲ್ಲಿ ಶಿಸ್ತು ಪಾಲಿಸದಿದ್ದರೆ ಸಹಿಸಲು ಆಗುವುದಿಲ್ಲ. ಒಣ ಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟನೆಗೆ ಮುಂದಾಗಿ..
ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ನಡೆಸಲು ಬುಧವಾರ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಲೋಕಲ್ ಲೀಡರ್ಗಳಿಗೆ ನೀಡಿದ ಕಡಕ್ ಸಂದೇಶವಿದು. ಅಧ್ಯಕ್ಷರಾದ ಬಳಿಕ ಮೊದಲ ಸಲ ಜಿಲ್ಲೆಗೆ ಭೇಟಿ ನೀಡಿದ್ದ ಡಿಕೆಶಿ ಅವರಿಗೆ ಸಭೆಯಲ್ಲಿ ಅಶಿಸ್ತು ಕಂಡು ಸ್ಥಳೀಯ ಮುಖಂಡರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.
2023ರಲ್ಲಿ ಅಧಿಕಾರಕ್ಕೆ ಬರಲು ಪಕ್ಷ ಈಗಿನಿಂದಲೇ ಶತಪತ್ರಯತ್ನ ಮಾಡುತ್ತಿದೆ. ಆದರೆ ಗಿರಿ ಜಿಲ್ಲೆಯ ಕೈಪಾಳಯದಲ್ಲಿ ಸಂಘಟನೆ ಹಾಲತ್ ಬಿಲ್ಕುಲ್ ಖರಾಬ್ ಇದೆ ಎಂಬುದನ್ನು ಇಷ್ಟುದಿನ ಬೆಂಗಳೂರಿನಲ್ಲೇ ಕುಳಿತು ಕೇಳುತ್ತಿದ್ದ ಅಧ್ಯಕ್ಷರು ಮೊನ್ನೆ ಕಣ್ಣಾರೆ ಕಂಡು ಕ್ಷಣಕಾಲ ಶಾಕ್ ಆದರು.
ಕೆಪಿಸಿಸಿ ಡಿಜಿಟಲ್ ಸದಸ್ಯತ್ವ ಅಭಿಯಾನ ಗಂಭೀರವಾಗಿ ತೆಗೆದುಕೊಂಡಿದೆ. ಜಿಲ್ಲೆಯಲ್ಲಿ ಇದಕ್ಕಾಗಿ ಮುಖ್ಯ ವಿಸ್ತಾರಕರು, ಸಹ ವಿಸ್ತಾರಕರ ನೇಮಕ ಮಾಡಿದೆ. ಈ ಬಗ್ಗೆ ಪರಿಶೀಲಿಸಲು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಉಸ್ತುವಾರಿಯಾಗಿ ನೇಮಿಸಿದೆ. ಆದರೆ ಇದುವರೆಗೆ ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನ ನೆಲ ಬಿಟ್ಟು ಮೇಲೇಳದಿರುವುದು ಡಿಕೆಶಿ ಸಿಟ್ಟಿಗೆ ಕಾರಣವಾಗಿತ್ತು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಸದಸ್ಯತ್ವ ನೋಂದಣಿ ಗುರಿ ಕೆಪಿಸಿಸಿ ನೀಡಿದೆ. ಆದರೆ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಇದುವರೆಗೆ ಶೇ.50 ಗುರಿಯೂ ತಲುಪಿಲ್ಲ. ಮೂಲಗಳ ಪ್ರಕಾರ ಯಾದಗಿರಿ 12 ಸಾವಿರ, ಸುರಪುರ 13 ಸಾವಿರ, ಶಹಾಪುರ 8 ಸಾವಿರ ಹಾಗೂ ಗುರುಮಠಕಲ್ ಕೇವಲ 5000 ಜನರನ್ನು ನೋಂದಣಿ ಮಾಡಿಸುವ ಮೂಲಕ ಕೊನೇ ಸ್ಥಾನದಲ್ಲಿರುವುದು ಶೋಚನೀಯ ಸಂಗತಿ.
ಒಂದು ಕಾಲಕ್ಕೆ ಗಿರಿ ಜಿಲ್ಲೆ ಪಕ್ಷದ ಭದ್ರಕೋಟೆಯಾಗಿತ್ತು. ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾಜರ್ುನ ಖಗರ್ೆ ಸೇರಿ ಹಲವು ನಾಯಕರನ್ನು ಬೆಳೆಸಿದ ಕೀತರ್ಿ ಕೈ ಪಕ್ಷಕ್ಕಿತ್ತು. ಆದರೆ ಸ್ಥಳೀಯ ಮುಖಂಡರಲ್ಲಿ ಒಣಪ್ರತಿಷ್ಠೆ ಹೆಚ್ಚಾದ ಕಾರಣ ಐದು ವರ್ಷದಿಂದ ಜಿಲ್ಲೆಯಲ್ಲಿ ಸಂಘಟನೆ ಹಳಿತಪ್ಪಿದ್ದು, ಮುಖಂಡರ ಅಸಹಾಯಕತೆ ಎಷ್ಟಿದೆ ಎಂಬುದು ಬುಧವಾರದ ಸಭೆಯಲ್ಲಿ ಪಕ್ಷನಿಷ್ಠರಿಗೆ ಖಾತ್ರಿಯಾಗಿದ್ದು ಸುಳ್ಳಲ್ಲ.
ರಾಜ್ಯಾಧ್ಯಕ್ಷರು ಸದಸ್ಯತ್ವ ಅಭಿಯಾನಕ್ಕೆ ಬರುತ್ತಿದ್ದಾರೆ. ನಮಗೆ ನೀಡಿದ ಗುರಿ ತಲುಪಿದ್ದೀವಾ? ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಯಾವ ರೀತಿ ಉತ್ತರ ಕೊಡಬೇಕು ಎಂಬ ಬಗ್ಗೆ ಯಾರ ಬಳಿಯೂ ಪೂರ್ವ ತಯಾರಿ ಇರದಂತೆ ಕಂಡು ಬಂದಿತು. ಇಡೀ ನಗರದಲ್ಲಿ ಬ್ಯಾನರ್, ಬಂಟಿಂಗ್ಗಳಲ್ಲೇ ಮುಖಂಡರು ಮಿಂಚುವ ಮೂಲಕ ಶಹಬ್ಬಾಶ್ಗಿರಿ ಕೊಡುತ್ತಾರೇನೋ ಎಂದು ಕಾತರರಾಗಿ ಕುಳಿತಂತೆ ಕಂಡು ಬಂದಿತು.
ಬಿಜೆಪಿಯನ್ನಾದರೂ ನೋಡಿ ಕಲಿಯಿರಿ
ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸಂಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ ವಿನಃ ಅವರ ಸಾಂಘಿಕ ಯಜ್ಞದ ಹಿಂದಿನ ಅಸಲಿ ಶ್ರಮ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದಿರುವುದು ಕೈ ಪಕ್ಷ ದಿನೇದಿನೆ ಸೊರಗಲು ಕಾರಣ. ಬಿಜೆಪಿಯ ಬೈಠಕ್, ಪ್ರಶಿಕ್ಷಣ ವರ್ಗದಂಥ ಕಾರ್ಯಕ್ರಮದಲ್ಲಿ ಮೊದಲು ಕಾರ್ಯಕರ್ತರಿಗೆ ಶಿಸ್ತಿನ ಪಾಠ ಹೇಳಿಕೊಡಲಾಗುತ್ತದೆ. ಎಂಪಿ, ಎಮ್ಮೆಲ್ಲೆ, ಮಂತ್ರಿ ಹೀಗೆ ಯಾರೇ ಇರಲಿ ಅಲ್ಲಿ ಒಂದೇ ಸ್ಥಾನಮಾನ ಕೊಡಲಾಗುತ್ತಿದೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಮೊದಲು ಗುರುತಿಸಿ ಸಭೆಯಲ್ಲಿ ಗೌರವಿಸಲಾಗುತ್ತಿದೆ. ಇದನ್ನಾದರೂ ನೋಡಿ ಕಾಂಗ್ರೆಸ್ಗೆ ಕಲಿಯುವ ಅನಿವಾರ್ಯತೆ ಇದೆ ಎಂದು ಪಕ್ಷದ ಹಿರಿಯ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.