

ಚಾಮರಾಜನಗರ: ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರ ಲಾರಿ, ಟೆಂಪೋಗಳು ಸರಕು ಸಾಗಾಣೆ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಚಾಮರಾಜನಗರ ಲೋಕಲ್ ಲಾರಿ ಮತ್ತು ಟೆಂಪೋ ಮಾಲೀಕರ ಸಂಘ ಪದಾಧಿಕಾರಿಗಳು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.
ಕೈಗಾರಿಕಾ ಪ್ರದೇಶದ ್ಯಾಕ್ಟರಿಗಳ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು, ಸರಕು ಸಾಗಾಣೆಗೆ ಅವಕಾಶ ನೀಡದೆ ಇದ್ದರೆ ಜಿಲ್ಲೆಗೆ ಯಾರೇ ಸಚಿವರು ಬಂದರೂ ೇರಾವ್ ಹಾಕಲಾಗುತ್ತದೆ ಎಂದರು. ಇದೇ ವೇಳೆ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಮಾತನಾಡಿ, ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಲಾರಿ, ಟೆಂಪೋಗಳಿಗೆ ಸರಕು, ಸಾಗಾಣಿಕೆ ಗೆ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಹೊರಗಡೆಯಿಂದ ಬರುವ ಲಾರಿಗಳನ್ನು ಇಲ್ಲಿಗೆ ಬರಲು ಬಿಡುವುದಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ನಮ್ಮ ಮನವಿ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಲೂರು ಮಲ್ಲು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗದೆ ಅನ್ಯಾಯವಾಗುತ್ತಿದೆ. ನಿರುದ್ಯೋಗಿಗಳು ಬ್ಯಾಂಕ್‌ನಲ್ಲಿ ಸಾಲ ಮಾಡಿ ಟೆಂಪೊ, ಲಾರಿ ತೆಗೆದುಕೊಂಡರೆ ಸರಕು ಸಾಗಾಣೆಗೆ ಹೊರಗಿನ ಲಾರಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಇಲ್ಲೂ ಸಹ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗಿರಿಜಾ ಅವರಿಗೆ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತಹಿತರಕ್ಷಣಾ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಶಂಕರ್, ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್, ಚಾಮರಾಜನಗರ ಲೋಕಲ್ ಲಾರಿ ಮತ್ತು ಟೆಂಪೋ ಮಾಲೀಕರ ಸಂಘದ ಗೌರವಾಧ್ಯಕ್ಷ ಎಂ.ಎಸ್.ಮಂಜುನಾಥ್, ಉಪಾಧ್ಯಕ್ಷ ನಾಸೀರ್‌ಖಾನ್, ಕಾರ್ಯದರ್ಶಿ ಡಿ.ಕೆ.ಇರ್ಷಾದ್, ಖಜಾಂಚಿ ನಯೀಂ, ನಿರ್ದೇಶಕರಾದ ಅಸ್ಲಾಂ ಪಾಷ, ಮಹೇಶ್, ಸದಸ್ಯರಾದ ಜಬೀಉಲ್ಲಾ, ಜಾವಿದ್ ಪಾಷ, ಮಹೇಶ್, ಸಂತೋಷ, ಕನ್ನಡ
ಚಳವಳಿಗಾರರಾದ ಸುರೇಶ್ ವಾಜಪೇಯಿ, ಪ್ರಶಾಂತ್, ಶಿವಕುಮಾರ್, ಸುಂದರ್, ಸಿ.ಮಂಜುನಾಥ್, ಗಿರೀಶ್, ಆಕಾಶ್ ಇತರರು ಭಾಗವಹಿಸಿದ್ದರು.