ಸ್ಥಳದಲ್ಲೇ ಬೈಕ್ ಸವಾರ ಸಾವು

Published on

ಎಚ್.ಡಿ.ಕೋಟೆ: ತಾಲೂಕಿನ ವಡ್ಡರಗುಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ರಸ್ತೆ ದುರಸ್ತಿಗೆಂದು ಸುರಿಯಲಾಗಿದ್ದ ಜಲ್ಲಿಕಲ್ಲಿನಿಂದ ಅವಘಡ ಸಂಭವಿಸಿದೆ ಎಂದು ಆರೋಪಿಸಿ ಗುತ್ತಿಗೆದಾರನ ವಿರುದ್ಧ ಕುಟುಂಬದವರು ದೂರು ನೀಡಿದ್ದಾರೆ.

ತಾಲೂಕಿನ ಹಾರೋಪುರ ಗ್ರಾಮದ ಭಕ್ತಿ ಪ್ರಸಾದ್ (32) ಮೃತ ಸವಾರ. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬುಧವಾರ ರಾತ್ರಿ ರಸ್ತೆ ದುರಸ್ತಿಗೆಂದು ಸುರಿಯಲಾಗಿದ್ದ ಜಲ್ಲಿಕಲ್ಲಿನ ಮೇಲೆ ಆಯತಪ್ಪಿ ಬಿದ್ದಿದ್ದಾನೆ. ಇದರಿಂದ ಗಂಭಿರ ಗಾಯಗೊಂಡು ಮೃತಪಟ್ಟಿದ್ದು, ಈ ಅಪಘಾತಕ್ಕೆ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರನೇ ಕಾರಣ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಟುಂಬದವರು ದೂರು ನೀಡಿದ್ದಾರೆ.

ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪಘಾತ ನಡೆದು ತೀವ್ರ ಪೆಟ್ಟು ಬಿದ್ದ ಯುವಕ ನರಳಾಡುತ್ತಿದ್ದ. ಸ್ಥಳೀಯರು 108ಗೆ ಕರೆ ಮಾಡಿದರೂ ಆಂಬುಲೆನ್ಸ್ ಬರುವುದು ಒಂದು ಗಂಟೆ ತಡವಾಗಿದೆ. ಹಾಗಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net