ಸ್ತ್ರೀರೋಗ ತಜ್ಞರನ್ನು ನೇಮಿಸಲು ಆಗ್ರಹ

IMG_7203
Published on

ಹುಮನಾಬಾದ್: ಹಳ್ಳಿಖೇಡ (ಬಿ) ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತಿçರೋಗ ತಜ್ಞರು ಇಲ್ಲದ ಕಾರಣ ಮಹಿಳೆಯರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಮಹಿಳಾ ವೈದ್ಯರ ನೇಮಕ ಮಾಡುವಂತೆ ಕರ್ನಾಟಕ ವಿದ್ಯಾರ್ಥಿ ವೇದಿಕೆ ಒತ್ತಾಯಿಸಿತು.

ಪಟ್ಟಣ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಜನರ ಅನುಕೂಲಕ್ಕಾಗಿ ಸ್ತಿçÃರೋಗ ತಜ್ಞರನ್ನು ಹಳ್ಳಿಖೇಡ (ಬಿ) ಆಸ್ಪತ್ರೆಗೆ ನಿಯೋಜಿಸಬೇಕು. ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ಬಸವಕಲ್ಯಾಣಕ್ಕೆ ನಿಯೋಜಿಸಿದ್ದು, ರದ್ದು ಪಡಿಸಬೇಕು. ಅಲ್ಲಿ ಈಗಾಗಲೇ ಎರಡ್ಮೂರು ಸ್ತಿçÃರೋಗ ತಜ್ಞರು ಇದ್ದರೂ ನಿಯೋಜನೆ ಮೇಲೆ ಕಳುಹಿಸಿದ್ದಾರೆ. ಇದರಿಂದ ತೀವ್ರ ಸಮಸ್ಯೆ ಆಗುತ್ತಿದೆ ಎಂದು ಮನವರಿಕೆ ಮಾಡಿದರು.
ಚಿಟಗುಪ್ಪ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತಿçರೋಗ ತಜ್ಞರು ವೈಯಕ್ತಿಕ ಕಾರಣದಿಂದ ರಜೆ ತೆಗೆದುಕೊಂಡಿದ್ದು, ಅಲ್ಲಿನ ರೋಗಿಗಳೂ ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಆಸ್ಪತ್ರೆಯವರು ಭೀತಿ ಹುಟ್ಟಿಸಿ, ನಾರ್ಮಲ್ ಆಗುವ ಹೆರಿಗೆಯನ್ನು ಹಣದ ಆಸೆಗೆ ಸೀಜರ್ ಮಾಡುತ್ತಿದ್ದಾರೆ. ರಜೆ ಮೇಲೆ ಹೋಗಿರುವ ವೈದ್ಯರು ಬರುವವರೆಗೆ ಚಿಟಗುಪ್ಪ ಸರ್ಕಾರಿ ಆಸ್ಪತ್ರೆಗೂ ಸ್ತಿçರೋಗ ತಜ್ಞರನ್ನು ನಿಯೋಜನೆ (ಡೆಪ್ಟೇಷನ್) ಮೇಲೆ ನೀಡಬೇಕು ಎಂದು ಆಗ್ರಹಿಸಿದರು.
ಹಳ್ಳಿಖೇಡ (ಕೆ)ದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೈದ್ಯರು ಇರುವುದಿಲ್ಲ. ಇದರಿಂದ ರೋಗಿಗಳಿಗೆ ರಾತ್ರಿ ತೊಂದರೆ ಆಗುತ್ತದೆ. ವಾರದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ವೇದಿಕೆಯಿಂದ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಗ್ರೇಡ್ -೨ ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ಮನೋಜ ಸಿತಾಳೆ, ಜಿಲ್ಲಾಧ್ಯಕ್ಷ ಮಹೇಶ ಮಲಗಿ, ಪ್ರಮುಖರಾದ ಸಂಗಮೇಶ ಶಿವಪೂಜಿ, ಜೈಪಾಲ ಝಳ್ಳೆ, ಚಂದು ಹಂದ್ರಾಳೆ, ಹುಸೇನ ಸಿಂಧನಕೇರಾ, ಸಂದೀಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net