ಸ್ತ್ರೀರೋಗ ಉಚಿತ ತಪಾಸಣಾ ಶಿಬಿರ ನಾಳೆ

Published on

ಮಳವಳ್ಳಿ: ಪಟ್ಟಣದ ಇನ್ನರ್ ವೀಲ್ ಕ್ಲಬ್ ಹಾಗೂ ಬೆಂಗಳೂರಿನ ಅಲ್ಟಿಯಸ್ ಆಸ್ಪತ್ರೆ ಸಹಯೋಗದಲ್ಲಿ ಸೆ.3 ರಂದು ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿ ಸ್ತ್ರೀರೋಗ ಸಂಬಂಧ ಉಚಿತ ತಪಾಸಣಾ ಶಿಬಿರ ನಡೆಯಲಿದೆ.


ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2.30 ಗಂಟೆವರೆಗೆ ತಪಾಸಣೆ ನಡೆಯಲಿದೆ. ಗರ್ಭಕೋಶ ಕಾಯಿಲೆ ಮತ್ತು ಬಂಜೆತನ ಸೇರಿದಂತೆ ಮಹಿಳೆಯರ ಇತರ ಸಮಸ್ಯೆಗಳಿಗೆ ನುರಿತ ಸ್ತ್ರೀ ರೋಗ ತಜ್ಞವೈದ್ಯರಿಂದ ತಪಾಸಣೆಯ ಜತೆಗೆ ಸೂಕ್ತ ಸಲಹೆ ದೊರಕಲಿದ್ದು, ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಮಹಿಳೆಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶೋಭಾ ಗುರುಪ್ರಸಾದ್ ಮೊ: 9242870121 ಮತ್ತು ಮಾಜಿ ಅಧ್ಯಕ್ಷ ಸುಧಾ ಚಂದ್ರಶೇಖರ್ ಮೊ: 9844141555 ಸಂಪರ್ಕಿಸಲು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net