ಸ್ತ್ರೀಯರು ಸಾಧನೆ ಮಾಡಲಿ

s b science
Published on

ಕಲಬುರಗಿ: ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು. ಸಿಲ್ವರ್ ಸ್ಪೂನ್ ಎಂಟರ್‌ ಪ್ರೈಸೆಸ್ ಸಂಸ್ಥಾಪಕಿ ಮಧುಶ್ರೀ ದೇಶಪಾಂಡೆ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಶಕ್ತಿ, ಸಾಮರ್ಥ್ಯ ಗುರುತಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ಮಾತ್ರ ಈ ದಿನಾಚರಣೆಗೆ ಸಾರ್ಥಕತೆ ಬರಲಿದೆ ಎಂದರು. ಪ್ರಾಚಾರ್ಯ ಡಾ.ಬಿ. ರಾಮಕೃಷ್ಣ ರೆಡ್ಡಿ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಡಾ.ಟಿ.ವಿ. ಬಿರಾದಾರ್ ಮಾತನಾಡಿ, ಇಂದಿನ ಕಾಲದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶಗಳು ದೊರಕುತ್ತಿವೆ. ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಸಂಯೋಜಕ ಡಾ.ಓಂಪ್ರಕಾಶ್ ಮಾತನಾಡಿದರು. ಸಸ್ಯಶಾಸ್ತç ವಿಭಾಗದ ಮುಖ್ಯಸ್ಥೆ ಡಾ.ಲತಾದೇವಿ ಕರಿಕಲ್, ಮಹಿಳಾ ಕೋಶದ ಸಂಯೋಜಕಿ ಡಾ.ಜಗದೇವಿ ಗುಡ್ಡ ಇತರರಿದ್ದರು. ವೇದಾ, ಗುರುಪ್ರಸಾದ ಪ್ರಾರ್ಥಿಸಿದರು. ಪವಿತ್ರಾ ಪಾಟೀಲ್, ಅಖಿಲಾ ಅತಿಥಿಗಳನ್ನು ಪರಿಚಯಿಸಿದರು. ರೇಣುಕಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net