ಸ್ತ್ರೀಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಗೊಳಿಸಿ

Congress
Published on

ಚಿತ್ರದುರ್ಗ: ಲೋಕಸಭೆ, ವಿಧಾನಸಭೆಯಲ್ಲಿ ಸ್ತ್ರೀಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಮುಂದಿನ ಅಧಿವೇಶನದಲ್ಲಿ ಅಂಗೀಕರಿಸಿ ಬಲ ತುಂಬಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಗೀತಾ ನಂದಿನಿಗೌಡ ಆಗ್ರಹಿಸಿದರು.

ಪಕ್ಷದ ಕಚೇರಿ ಮುಂಭಾಗ ಶುಕ್ರವಾರ ನಡೆದ 40ನೇ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿ, ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ಮಹಿಳೆಯರ ಪಾತ್ರವೂ ಹೆಚ್ಚಿದೆ. ನಮ್ಮ ನಾಯಕಿಯರಾದ ಸೋನಿಯಾಗಾಂಧಿ, ಪ್ರಿಯಾಂಕಾಗಾಂಧಿ ಬೆಂಬಲವೂ ಇದೆ ಎಂದರು.

ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿಗಳು ಮಹಿಳೆಯರಿಗೆ ಶಕ್ತಿ ತುಂಬಿವೆ. ಪಕ್ಷದ ಜನಪರ ಕಾರ್ಯಕ್ರಮಗಳ ಕುರಿತು ಹಲವೆಡೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಲಕ್ಷ್ಮಿಕಾಂತ, ಡಿ.ಎನ್.ಮೈಲಾರಪ್ಪ, ಪ್ರಸನ್ನಕುಮಾರ್, ಪ್ರಕಾಶ್ ರಾಮನಾಯ್ಕ್, ಕಾರೇಹಳ್ಳಿ ಉಲ್ಲಾಸ್, ತಿಪ್ಪೇಸ್ವಾಮಿ, ಸಂಪತ್‌ಕುಮಾರ್, ಜಾಹ್ನವಿ ನಾಗರಾಜ್, ಮೀನಾಕ್ಷಿ, ಮೋಕ್ಷಾ ರುದ್ರಸ್ವಾಮಿ, ಮುದಸಿರ್ ನವಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net