

ಕಲಬುರಗಿ: ಎಂಟು ಶತಮಾನಗಳ ಹಿಂದೆ ಲಿಂಗ ಸಮಾನತೆ ಮತ್ತು ಸ್ತಿçà ಸ್ವಾತಂತ್ರÈದ ಬಗ್ಗೆ ಧ್ವನಿ ಎತ್ತಿದ ಮೊದಲ ಮಾನವತಾವಾದಿ ಬಸವಣ್ಣ ಎಂದು ಬೆಳಗಾವಿ ಚಿಂತಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ನಗರದ ಜಗತ್ ವೃತ್ತದ ಬಸವೇಶ್ವರ ಪ್ರತಿಮೆ ಆವರಣದ ಸಾಂಸ್ಕೃತಿಕ ವೇದಿಕೆ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ , ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟದಿಂದ ಗುರುವಾರ ಆಯೋಜಿಸಿದ್ದ ಬಸವ ಜಯಂತಿಯ ಅನುಭಾವ ಗೋಷ್ಠಿಯಲ್ಲಿ ಮಾತನಾಡಿ, ಶತಮಾನದಿಂದ ಕತ್ತಲೆಯಲ್ಲಿದ್ದ ಸ್ತಿçÃಯರಿಗೆ ಸ್ವಾತಂತ್ರÈವಿರಲಿಲ್ಲ. ಸ್ವಾತಂತ್ರÈಕ್ಕೆ ಅರ್ಹಳಲ್ಲ ಎಂಬ ನಿಲುವಿನಲ್ಲಿದ್ದ ಸಮಾಜದಲ್ಲಿ ಜನಿಸಿದ ಬಸವಣ್ಣ ವಿಚಾರ ಮೂಲಕ ಕ್ರಾಂತಿ ಮಾಡಿದರು. ಹೆಣ್ಣು ಮಾಯೆ ಎಂಬ ಸಮಾಜದಲ್ಲಿ ಅವಳಿಗೆ ಸ್ವಾತಂತ್ರÈ, ಸಮಾನತೆ ಎತ್ತಿ ಹಿಡಿದರು ಎಂದರು.
ಬಸವಣ್ಣನವರ ಅನುಭವ ಮಂಟಪದ ಕಲ್ಪನೆಯೇ ವಿನೂತನ. ಹಲವು ಶರಣ, ಶರಣರು ಭಾಗವಹಿಸುವ ಅವಕಾಶ ಕಲ್ಪಿಸಿದರು. ಹಲವು ವಚನಕಾರ್ತಿಯರು ಸಾವಿರಾರು ವಚನ ರಚಿಸಿ ಪುರುಷರಿಗೆ ನಾವು ಕಮ್ಮಿಯಿಲ್ಲ ಎಂಬ ಸಂದೇಶ ನೀಡಿದ್ದರು. ಇಂಥ ಹುಲುಸಾದ ಸಾಹಿತ್ಯ ಪ್ರಕಾರ ಪ್ರಪಂಚದ ಬೇರೆ ಯಾವ ಭಾಷೆಯಲ್ಲೂ ಇಲ್ಲ ಎಂದು ಹೇಳಿದರು.
ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಉದ್ಘಾಟಿಸಿದರು. ಉತ್ತರ ಕನ್ನಡದ ಬಸವೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಶಕುಂತಲಾ ದುರ್ಗಿ, ಡಾ.ಶೀಲಾ ಸಿದ್ರಾಮ,ಪ್ರಭುಲಿಂಗ ಮಹಾಗಾಂವಕರ, ಜಗನ್ನಾಥ ರಾಚೋಟಿ, ಎಸ್.ವಿ.ನಿಂಗಪ್ಪ, ರವೀಂದ್ರ ಶಾಬಾದಿ, ಆರ್.ಜಿ.ಶಟಗಾರ ಇತರರಿದ್ದರು. ಡಾ.ಶಿವಗಂಗಾ ರುಮ್ಮಾ ಸ್ವಾಗತಿಸಿದರು. ಶೀಲಾ ಕಾಮಶೆಟ್ಟಿ ನಿರೂಪಣೆ ಮಾಡಿದರು. ಸುಲೇಖಾ ಮಾಲಿಪಾಟೀಲï ವಂದಿಸಿದರು.