

ಕಲಬುರಗಿ: ಕಳೆದ ಹಲವು ವರ್ಷದಿಂದ ವೈಯಕ್ತಿಕವಾಗಿ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಇದೀಗ ಅದಕ್ಕೆ ಸಾಂಸ್ಥಿಕ ರೂಪ ನೀಡಿ, ಸಮಾಜದ ಸಹಕಾರದೊಂದಿಗೆ ಜಾಗೃತಿ ಜ್ಯೋತಿ ಟ್ರಸ್ಟ್ ಮೂಲಕ ಸ್ತಿçà ಸಶಕ್ತೀಕರಣ, ಯುವ ಸಬಲೀಕರಣ, ಏಕ ಪೋಷಕ ಮಕ್ಕಳಿಗೆ ಶಿಕ್ಷಣದಂತಹ ಮಹತ್ವದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಮಸಳಿ ಹೇಳಿದರು.
ಕಲಬುರಗಿಯ ಮಗಳಾಗಿದ್ದು, ೨೦೦೨ರಿಂದ ದೇಶದ ವಿವಿಧೆಡೆ ಸೇವಾ ಕಾರ್ಯ ಮಾಡುತ್ತಿದ್ದು, ಇದುವರೆಗೆ ಜಿಲ್ಲೆಯಲ್ಲಿ ೩೨ ಮಹಿಳೆಯರಿಗೆ ಸ್ವಾವಲಂಭಿ ಬದುಕಿಗೆ ಶಕ್ತಿ ತುಂಬಿದ್ದು, ೧೪೫ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಕೋವಿಡ್‌ನಲ್ಲಿ ಊಟ, ಆಕ್ಸಿಜನ್, ಔಷಧ ವಿತರಿಸಲಾಗಿದೆ. ೨೦೨೧ರಲ್ಲಿ ಇಂದೋರ್‌ನಲ್ಲಿ ಕೇಂದ್ರ ಆರಂಭಿಸಿ, ಸ್ತಿçà ಸಬಲೀಕರಣಕ್ಕೆ ತರಬೇತಿ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂದೂರ ಬಿ ಗ್ರಾಮದಲ್ಲಿ ಸಂಸ್ಕಾರ ಕೇಂದ್ರವನ್ನು ಆರಂಭಿಸಿದ್ದು, ಅದನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ನವೋದ್ಯಮಿಗಳಿಗೆ ಶೇ.೫೦ ರಿಯಾಯಿತಿಯಲ್ಲಿ ಸಾಲ ಯೋಜನೆ ಇದ್ದು, ಅದನ್ನು ನವೋದ್ಯಮಿಗಳಿಗೆ ತಿಳಿಸಿ, ಲಾಭ ದೊರಕಿಸಿ ಕೊಡಲಾಗುವುದು. ನಮ್ಮೊಂದಿಗೆ ಜಿಲ್ಲೆಯ ವೈದ್ಯರು, ಇಂಜಿನಿಯರ್‌ಗಳು, ಉದ್ಯಮಿಗಳು, ಸಮಾಜ ಸೇವಕರು ಇದ್ದರು. ಎಲ್ಲರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸೇವಾ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿಯಲ್ಲಿ ವಿವಿಧ ಖಾಸಗಿ ಆಸ್ಪತ್ರೆಗಳ ಸಹಕಾರದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಅಗತ್ಯ ಇರುವವರಿಗೆ ಚಿಕಿತ್ಸೆ, ಔಷಧ ವಿತರಣೆ ನಡೆಯುತ್ತಿದೆ. ಜೇವರ್ಗಿ ತಾಲೂಕಿನ ನಡುವಿನ ಹಳ್ಳಿಗೆ ಬಸ್ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಕೌಶಲಯುಕ್ತ ಯುವಕರಿಗೆ ವಿದೇಶಕ್ಕೆ ಉದ್ಯೋಗ, ಶಿಕ್ಷಣಕ್ಕೆ ಹೋಗುವ ಮಾರ್ಗದರ್ಶನ, ಸಹಕಾರ ನೀಡುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು. ಆಸಕ್ತರು, ಅವಶ್ಯಕತೆ ಇರುವವರು, ಸೇವಾಕರ್ತರು ಕೈ ಜೋಡಿಸಲು ೮೬೩೦೯೫೪೪೧೧ ಸಂಪರ್ಕಿಸಬೇಕು ಎಂದು ಕೋರಿದರು.
ವಾಣಿಶ್ರೀ ಮೊದಲಿಯಾರ, ಡಾ.ಹರೀಶ ಕುಲ್ಕರ್ಣಿ, ಅನ್ನಪೂರ್ಣ, ಲಕ್ಷಿö್ಮÃ ಬಿರಾದಾರ, ರಾಜಶ್ರೀ ಇತರರಿದ್ದರು.