ಸ್ತ್ರೀ ಶಿಕ್ಷಿತರಾಗಿ ಸದುಪಯೋಗಿಗಳಾಗಿ

2506Klb08
Published on

ಕಲಬುರಗಿ: ಮಹಿಳೆಯರು ಶಿಕ್ಷಿತರಾಗಿ ತಮ್ಮ ಹಕ್ಕುಗಳ ಪಡೆಯಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿ, ಸಾಧಕರಾಗಿ ಹೊರ ಹೊಮ್ಮಬೇಕುಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿö್ಮ ಚೌಧರಿ ಹೇಳಿದರು.
ಅಫಜಲಪುರ ತಾಲೂಕಿನ ಗೊಬ್ಬುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಸಾP್ಷÀರತೆ ಕೊರತೆ ಮಹಿಳೆಯರ ಹಿಂದುಳಿವಿಕೆಗೆ ಕಾರಣ. ಸಾP್ಷÀರತೆಯಿಂದ ಪ್ರಗತಿ ಸಾಧ್ಯ. ಬೆಂಗಳೂರಿನ ಮಗಳಾದರು ಕಲಬುರಗಿ ಸೊಸೆಯಾಗಿರುವೆ. ೧೨ ವರ್ಷ ಎಚ್‌ಕೆಇ ಸಂಸ್ಥೆಯ ಡೆಂಟಲï ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿರುವೆ ಎಂದು ತಮ್ಮ ಕಲಬುರಗಿ ನಂಟು ಬಿಚ್ಚಿಟ್ಟರು.
ಮಹಿಳೆಯರಲ್ಲಿ ಸ್ತನ, ಗರ್ಭ ಕ್ಯಾನ್ಸರ್ ಹೆಚ್ಚುತ್ತಿದ್ದು, ಇಂತಹ ಆರೋಗ್ಯ ಶಿಬಿರಗಳ ಮೂಲಕ ಉಚಿತ ಚಿಕಿತ್ಸೆ ಪಡೆಯಬೇಕು. ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕೆ ಸರ್ಕಾರ ಜಾರಿ ತಂದಿರುವ ಹತ್ತಾರು ಯೋಜನೆಗಳ ಲಾಭ ಪಡೆದು, ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.
ಮಹಿಳೆಯರೊಂದಿಗೆ ಆತ್ಮೀಯವಾಗಿ ಸಂವಾದ ಕೈಗೊಂಡರು. ಆರೋಗ್ಯ ಕೇಂದ್ರದ ಹೆರಿಗೆ ಕೋಣೆ, ಲೇಬರ್ ರೂಂ, ಓಪಿಡಿ ಹೀಗೆ ವಿವಿಧ ಕೋಣೆ ಭೇಟಿ ನೀಡಿದ ರೋಗಿಗಳ ಆರೋಗ್ಯ ವಿಚಾರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ ಯು., ಡಿಸಿಪಿಓ ಮಂಗಳಾ ಪಾಟೀಲ್, ಪ್ರಭಾರಿ ಡಿಎಚ್‌ಓ ಡಾ.ಸುರೇಶ ಮೇಕಿನ್, ಜಿಲ್ಲಾ ಆರ್‌ಸಿಎಚ್‌ಓ ಡಾ.ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರತಿಕಾಂತಿ, ತಾಪಂ ಇಓ ವೀರಣ್ಣ ಕೌಲಗಿ, ಟಿಎಚ್‌ಓ ಡಾ.ರವಿ ಬಿರಾದಾರ, ಸ್ಥಳೀಯ ವೈದ್ಯಾಧಿಕಾರಿ ಡಾ.ಅಪರ್ಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net