ಸ್ತ್ರೀ ಶಿಕ್ಷಣ ನೀಡಿ ಸಬಲೀಕರಣ ಮಾಡಿ

2711Klb15
Published on

ಕಲಬುರಗಿ: ಬಾಲ್ಯ ವಿವಾಹ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಹಿಳೆಯರಿಗೆ ಶಿಕ್ಷಣ ನೀಡಿ ಸ್ತಿçà ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.

ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಾರ್ಗದರ್ಶಿ ಸಂಸ್ಥೆ ಆಶ್ರಯದಲ್ಲಿ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ಬಾಲ್ಯ ವಿವಾಹ ಮುಕ್ತ ಭಾರತ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯವಿವಾಹದ ಭೀಕರತೆ ಅರಿತ ಬ್ರಿಟಿಷರು ೧೯೨೯ರಲ್ಲೆ ಕಾಯ್ದೆ ಮೂಲಕ ಬಾಲ್ಯವಿವಾಹ ತಡೆಗಟ್ಟುವ ಕಾಯ್ದೆ ತಂದರು. ಬಾಲ್ಯವಿವಾಹಕ್ಕೆ ಬಡತನ, ಶಿಕ್ಷಣ ಕೊರತೆ ಕಾರಣ. ಮನೆಯಲ್ಲಿನ ಹಿರಿಯರು ಬದುಕುತ್ತಾರೋ ಇಲ್ಲವೋ ಎಂದು ಮಕ್ಕಳ, ಮೊಮ್ಮಕಳ ಮದುವೆ ನೋಡುವೆ ಆಸೆಗೆ ಮಕ್ಕಳ ಭವಿಷ್ಯ ಹಾಳು ಮಾಡುತ್ತಾರೆ ಎಂದರು.

ಬಾಲ್ಯ ವಿವಾಹ ಗಮನಕ್ಕೆ ಬಂದರೆ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಬಹಿರಂಗಪಡಿಸಲ್ಲ ಎಂದರು.

ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಮಾತನಾಡಿ, ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆ, ವರದಕ್ಷಿಣೆ ಕಾರಣ. ಇದರ ತಡೆಗೆ ಕಾನೂನು ಮಾಹಿತಿ ಪಡೆಯುವುದು ಅವಶ್ಯ. ೧೧೨ ಮತ್ತು ೧೦೦ ಸಂಖ್ಯೆಗೆ ಕರೆ ಮಾಡಿ, ದೂರು ಸಲ್ಲಿಸಬಹುದು. ಹೆಣ್ಣು ಮಗುವೆಂದರೆ ಕೀಳು ಭಾವನೆ ತೆಗೆದು ಹಾಕಬೇಕು ಎಂದರು.

ಪೊಲೀಸ್, ಮಹಿಳಾ ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಸೇರಿ ಎಲ್ಲ ಇಲಾಖೆಯ ಸಾರ್ವಜನಿಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಿಲ್ಲೆಯನ್ನು ಬಾಲ್ಯಮುಕ್ತ ಮಾಡಬಹುದು ಎಂದರು.

ಸAವಿಧಾನದ ಪೀಠಿಕೆ ವಾಚಿಸಲಾಯಿತು. ಪ್ರಾಂಶುಪಾಲ ಪ್ರೊ.ಮೋರಗೆ ಪ್ರಕಾಶ ವಿ, ಆನಂದರಾಜ ಡಿ, ವಿಠ್ಠಲ್ ಚಿಕಣಿ, ಬಸವರಾಜ ತೇಗಳಿ, ಭರತೇಶ ಶೀಲವಂತ, ಜ್ಯೋತಿ ಕೆ.ಎಸ್., ವಿ.ಎನ್.ಬಿರಾದಾರ, ವಿದ್ಯಾ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net