

ಚಾಮರಾಜನಗರ : ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಸಂಘಗಳನ್ನು ಸಬಲೀಕರಣಗೊಳಿಸಲು ಪ್ರತಿ ಸಂಘಟನೆಗೆ ತಲಾ ಒಂದು ಲಕ್ಷ ರೂ.ನಂತೆ ಚೆಕ್ ವಿತರಿಸಲಾಗಿದ್ದು, ಈ ಹಣದಿಂದ ಸಂಘವನ್ನು ಬಲವರ್ಧನೆಗೊಳಿಸಬೇಕೆಂದು ಶಾಸಕ ಎನ್.ಮಹೇಶ್ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಯಳಂದೂರು, ಕೊಳ್ಳೇಗಾಲ, ಸಂತೇಮರಳ್ಳಿಯ 50 ಮಹಿಳಾ ಸ್ವ-ಸಹಾಯ ಸಂಘಗಳಿಗೆ ಈ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಹಣವನ್ನು ಹಬ್ಬ ಹರಿದಿನಗಳಲ್ಲಿ ಖರ್ಚು ಮಾಡದೇ ಸಂಘದ ಆರ್ಥಿಕ ಅಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ನಾಗೇಶ್, ಟಿ.ಎಂ.ಜಯಶೀಲಾ, ಸೋಮಶೇಖರ್, ಎಸಿಡಿಪಿಒ ಸರ್ವೇಶಮೂರ್ತಿ, ಮೇಲ್ವಿಚಾರಕ ಶಿವಲೀಲಾ, ಗೌಸಿಯಾ, ಪೂರ್ಣಿಮಾ, ಸರಸ್ವತಿ, ರುಕ್ಮಣಿ ಇತರರು ಇದ್ದರು.