ಸ್ತ್ರೀ ವಿರೋಧಿ ಬಿಜೆಪಿಯನ್ನು ಸೋಲಿಸಿ

menakshi bali
Published on

ಕಲಬುರಗಿ: ದೇಶದಲ್ಲಿ ಮನುವಾದಿ, ಸ್ತಿçà ವಿರೋಧಿ ಮನಸ್ಥಿತಿಯ, ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷ ಮೀನಾಕ್ಷಿ ಬಾಳಿ ಮನವಿ ಮಾಡಿದರು.
ದೇಶದಲ್ಲಿ ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ. ೨೦೧೪ರಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ ನಂತರ ದೇಶ ದಿವಾಳಿಯಾಗುತ್ತಿದೆ. ಬಂಡವಾಳ ಶಾಯಿಗಳ ಕೈಯಲ್ಲಿ ಮೋದಿ ದೇಶದ ಸಂಪತ್ತನ್ನು ಅಡವಿಟ್ಟಿದ್ದಾರೆ. ವೈಫಲ್ಯ ಮುಚ್ಚಿಡಲು ಹಿಂದುತ್ವದ ಅಮಲು ಏರಿಸಿ, ಜನರ ದಿಕ್ಕು ತಪ್ಪಿಸುತ್ತಿದ್ದು, ಅವರನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹತ್ರಾಸ್, ಆಸಿಫಾ, ಬಿಲ್ಕಿಸ್‌ಬಾನು ಸೇರಿ ವಿವಿಧ ಪ್ರಕರಣಗಳಲ್ಲಿ ಸ್ತಿçà ವಿರೋಧಿ ಧೋರಣೆಗಳು ನಿರಂತರವಾಗಿ ಸಾಗಿವೆ. ಬಿಜೆಪಿಯ ಚುನಾವಣೆ ಪ್ರಚಾರದ ಜಾಹಿರಾತಿನಲ್ಲೂ ಮಹಿಳೆಯನ್ನು ಮಾರಾಟದ ಸರಕಿನಂತೆ ಬಿಂಬಿಸಲಾಗಿದೆ ಎಂದು ಕಿಡಿ ಕಾರಿದರು. ದೇಶದಲ್ಲಿ ಏಕರೂಪವಲ್ಲ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ಮಹಿಳೆಯರು, ದಲಿತರು, ಕಾರ್ಮಿಕರು, ದುಡಿಯುವ ವರ್ಗಕ್ಕೆ ಲಾಭದಾಯಕವಾದ ನರೇಗಾ ಅನುದಾನವನ್ನು ಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಜನ, ದೇಶ ವಿರೋಧಿ ನಿಯಮ, ಕಾನೂನು, ದೇಶದ ಸ್ಥಿತಿ ಗತಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು `ಭಾರತದ ಮಹಿಳೆಯರ ಸ್ಥಿತಿ ಗತಿಗಳು' ೨೦೧೪-೨೦೨೪ರವರೆಗೆ ದಶಕದ ಅನುಭವಗಳ ಕುರಿತು ಕಿರು ಪುಸ್ತಕ ಬರೆದಿದ್ದು, ಜನರಿಗೆ ತಲುಪಿಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸಂಘಟನೆ ಉಪಾಧ್ಯಕ್ಷೆ ನೀಲಾ ಕೆ. ಮಾತನಾಡಿ, ದೇಶದಲ್ಲಿ ಮಹಿಳೆಯರ ಜೀವನ ಭದ್ರತೆ ನೀಡುತ್ತಿಲ್ಲ. ಅತ್ಯಾಚಾರ, ಆರ್ಥಿಕ ಬಿಕ್ಕಟ್ಟು ಹೆಚ್ಚಳವಾಗುತ್ತಿದೆ. ಆದ್ದರಿಂದ ಬಿಜೆಪಿಯನ್ನು ಸೋಲಿಸಲು ಮನವಿ ಮಾಡಲಾಗುತ್ತಿದೆ. ಬಿಜೆಪಿ ಮನಸ್ಥಿತಿಯಿಂದ ಹೊರತಾದ ಪ್ರತಿ ಪಕ್ಷಗಳಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ, ಸುಗಂಧಾ ಮಾವಿನಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net