ಸ್ತ್ರೀ ಕೌಶಲ ಅನಾವರಣಕ್ಕೆ ವಿಜಯವಾಣಿ ವೇದಿಕೆ

03 VJV 04
Published on

ಕಲಬುರಗಿ: ಬಣ್ಣ ಬಣ್ಣದ ರಂಗೋಲಿಯಲ್ಲಿ ಸ್ತ್ರೀಯರ ಶಕ್ತಿ, ಸಂವೇದನೆ ಅನಾವರಣ… ಮಾನಿನಿಯರ ಕೈಗಳಲ್ಲಿ ಮೂಡಿದ ಮೆಹಂದಿ ಕಲಾ ಕುಸುರಿ ಚಿತ್ತಾರ… ಬೆಂಕಿಯಿಲ್ಲದೆ ಸಿದ್ಧವಾದ ವೈವಿಧ್ಯಮಯ ಅಡುಗೆ.. ಮ್ಯೂಸಿಕಲ್ ಚೇರ್, ಆಲೂಗಡ್ಡೆ ಆಟದಲ್ಲಿ ಜೋಶ್.. ಮುಸ್ಸಂಜೆಯ ಫ್ಯಾಶನ್ ಶೋನಲ್ಲಿ ಮಾತೃಸ್ವರೂಪಿಗಳ ಸೌಂದರ್ಯದ ಪ್ರದರ್ಶನ…
ವಿಶ್ವ ಮಹಿಳಾ ದಿನ ನಿಮಿತ್ತ ಕನ್ನಡದ ನಂ.೧ ದಿನಪತ್ರಿಕೆ ವಿಜಯವಾಣಿ ಮತ್ತು ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆಯಿಂದ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಸಹಕಾರದಡಿ ನಗರದ ರೋಟರಿ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಕಂಡು ಬಂದ ದೃಶ್ಯವಿದು.
ಬೆಳಗ್ಗೆ ೮ಕ್ಕೆ ಶುರುವಾದ ಸ್ಪರ್ಧೆಗಳು ರಾತ್ರಿ ೧೦ರವರೆಗೆ ನಡೆದವು. ಬೆಳಗ್ಗೆಯಿಂದಲೇ ನೂರಾರು ಮಹಿಳೆಯಳು ನಿರೀಕ್ಷೆಗೂ ಮೀರಿ ಭಾಗವಹಿಸಿ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪೈಪೋಟಿ ನೀಡಿದರು.
ರಂಗೋಲಿ ಸ್ಪರ್ಧೆಗೆ ಸುಜನಿ ಆಸ್ಪತ್ರೆ ಸ್ತಿçÃರೋಗ ತಜ್ಞೆ ಡಾ.ಪೂರ್ಣಿಮಾ ಎಸ್.ಪಾಟೀಲ್ ಚಾಲನೆ ನೀಡಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ರಂಗೋಲಿಯಲ್ಲಿ ಐದು ವರ್ಷದ ಬಾಲಕಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರಲ್ಲದೆ ೭೦ ವರ್ಷದ ಹಿರಿಯ ಜೀವಿಯೂ ಭಾಗವಹಿಸಿ ತಮ್ಮ ಕೈಚಳಕದಿಂದ ವಿವಿಧ ಬಗೆಯ ರಂಗೋಲಿ ಬಿಡಿಸಿ ಗಮನ ಸೆಳೆದರು. ನ್ಯಾಯವಾದಿಗಳಾದ ಜ್ಯೋತಿಲಕ್ಷಿö್ಮà ಸಿರಿ, ಪ್ರೀತಿ ಪಾಟೀಲ್ ಮೇಳಕುಂದಿ ತೀರ್ಪುಗಾರರಾಗಿದ್ದರು.
ಮೆಹಂದಿ ಸ್ಪರ್ಧೆ: ನಗರದ ನೂರಾರು ಮಹಿಳೆಯರು ಮೆಹಂದಿಯಲ್ಲಿ ತಮ್ಮ ಕಲಾ ಕುಸುರಿ ಬಿಡಿಸುವ ಮೂಲಕ ಗಮನ ಸೆಳೆದರು. ಅತ್ಯಂತ ಸೂಕ್ಷö್ಮತೆಯೊಂದಿಗೆ ಒಬ್ಬರಿಗಿಂತ ಒಬ್ಬರು ಅತ್ಯಂತ ಸುಂದರ, ಮನಮೋಹಕವಾದ ಕಲೆ (ಚಿತ್ತಾರ)ಯನ್ನು ಕೈಯಲ್ಲಿ ಮೂಡಿಸಿ ಕೌಶಲ ಸಾಬೀತುಪಡಿಸಿದರು. ಖ್ಯಾತ ನೇತ್ರ ತಜ್ಞೆ ಡಾ.ರಾಜಶ್ರೀ ರಡ್ಡಿ ಅವರು ಮೆಹೆಂದಿ ಸ್ಪರ್ಧೆ ಉದ್ಘಾಟಿಸಿ ಜೋಶ್ ತುಂಬಿದರು.
ಮ್ಯೂಸಿಕಲ್ ಚೇರ್, ಪಿಕ್ ಟು ಆಲೂಗಡ್ಡೆ: ರೋಟರಿ ಆವರಣದಲ್ಲಿ ಮಹಿಳೆಯರ ಲೋಕವೇ ಸೃಷ್ಟಿಯಾಗಿತ್ತು. ಯುವತಿಯರು, ಗೃಹಿಣಿಯರು, ಬಾಲಕಿಯರಿಗೆ ಏರ್ಪಡಿಸಿದ್ದ ಮ್ಯೂಸಿಕಲ್ ಚೇರ್, ಪಿಕ್ ಟು ಆಲೂಗಡ್ಡೆ ಸ್ಪರ್ಧೆಯಲ್ಲಿ ಅತ್ಯಂತ ಜೋಶ್‌ನೊಂದಿಗೆ ಪಾಲ್ಗೊಂಡು ತೀವ್ರ ಪೈಪೋಟಿಯೊಂದಿಗೆ ಗೆಲುವಿನ ಖುಷಿಯಲ್ಲಿ ತೇಲಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ವೈಜನಾಥ ವಾಲಿ, ಚಾರ್ಲಿ ಆಟವನ್ನು ನಿರ್ವಹಿಸಿದರು. ಕ್ರೀಡಾ ತರಬೇತುದಾರ ಪ್ರವೀಣ ಪುಣೆ ಸಹಕಾರ ನೀಡಿದರು.

ಬೆಂಕಿ ಇಲ್ಲದೆ ರುಚಿ-ಶುಚಿ ಅಡುಗೆ: ನಾನ್ ಫೈರ್ ಕುಕ್ಕಿಂಗ್ ಸ್ಪರ್ಧೆಯಲ್ಲಿ ಮಹಿಳೆಯರು ಬೆಂಕಿಯಿಲ್ಲದೆ, ಬೇಯಿಸದೆ ನೂರಕ್ಕೂ ಹೆಚ್ಚು ಸ್ವಾದಿಷ್ಟ ತಿಂಡಿ-ತಿನಿಸು, ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ತೀರ್ಪುಗಾರರ ಹುಬ್ಬೇರಿಸುವಂತೆ ಮಾಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಬೆಂಕಿ ಇಲ್ಲದೆ ಎಲ್ಲ ತರಹದ ತಿಂಡಿ-ತಿನಿಸಲು ಮಾಡಿದ್ದರು. ಬೆಳಗ್ಗೆ ಉಪಾಹಾರಕ್ಕೆ ಇಡ್ಲಿ ಚಟ್ನಿ, ಮಧ್ಯಾಹ್ನದ ಊಟಕ್ಕೆ ಅನ್ನ, ಮೊಸರನ್ನ, ಸ್ನ್ಯಾಕ್ಸ್​ ವಿವಿಧ ತಿನಿಸು ಸೇರಿ ೧೫೦ಕ್ಕೂ ಹೆಚ್ಚು ವೈವಿಧ್ಯಮಯ ರುಚಿಕಟ್ಟಾದ ಬಾಯಿಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ಮಾಡಿ ಪ್ರತಿಭೆ ಅನಾವರಣಗೊಳಿಸಿದರು.

ಮಿಂಚಿದ ಚೆಲುವೆಯರು: ಮಹಿಳಾ ದಿನ ನಿಮಿತ್ತ ಏರ್ಪಡಿಸಿದ್ದ ಮೂರು ವಿಭಾಗದ ಫ್ಯಾಶನ್ ಶೋನಲ್ಲಿ ನೂರಾರು ಬಾಲಕಿಯರು, ಯುವತಿಯರು, ಗೃಹಿಣಿಯರು ಚಂದದ ದಿರಿಸಿನಲ್ಲಿ ಹೆಜ್ಜೆ ಹಾಕಿದರು. ಸಂಗೀತದ ಗಾನಲಹರಿಯೊಂದಿಗೆ ಮೊದಲಿಗೆ ೬-೧೩ ವರ್ಷದೊಳಗಿನವರು ಸಾಂಪ್ರದಾಯಿಕ, ವೆಸ್ಟರ್ನ್ ಶೈಲಿ ದಿರಿಸಿನೊಂದಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನ ಗೆದ್ದರು. ಮಿಸ್ ಕಲಬುರಗಿ ಸ್ಪರ್ಧೆಯಲ್ಲಿ ಯುವತಿಯರು ವೈವಿಧ್ಯಮಯ ದಿರಿಸು ಧರಿಸಿ ವೈಯಾರದ ನಡಿಗೆ ಮಾಡಿದರು. ಯುವತಿಯರೇ ನಾಚುವಂತೆ ಗೃಹಿಣಿಯರು ಮಿಸೆಸ್ ಕಲಬುರಗಿಯಲ್ಲಿ ಭಾಗವಹಿಸಿ ರ‍್ಯಾಂಪ್ ವಾಕ್ ಮಾಡಿ ಪ್ರತಿಭೆ ಅನಾವರಣಗೊಳಿಸಿದರು. ಸುಮಿತ್ರಾ ಕಲಶೆಟ್ಟಿ, ಡಾ.ಸ್ನೇಹಾ ಕೃಪಾರಡ್ಡಿ, ಸುಷ್ಮಿತಾ ಮಾರ್ಟಿನಾ, ಡಾ.ರಷ್ಮಿ ಸಲಗರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಫ್ಯಾಶನ್ ಶೋನಲ್ಲಿ ಪ್ರಿಯಾಂಕಾ ಸಿ. ಪಾಟೀಲ್, ಶ್ವೇತಾ ಕೆ. ಪಾಟೀಲ್, ಲಕ್ಷ್ಮೀ ಡಿ. ಪಾಟೀಲ್, ಡಾ.ವೀಣಾ ವಿಕ್ರಂ ಸಿದ್ದಾರಡ್ಡಿ, ಡಾ.ರಾಜಶ್ರೀ ವಿ.ರಡ್ಡಿ, ಡಾ.ರಾಜೇಶ್ವರಿ ಎಸ್.ರಡ್ಡಿ, ಪಲ್ಲವಿ ಮುಕ್ಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net