ಸ್ತನ್ಯಪಾನ ತಪ್ಪು ತಿಳಿವಳಿಕೆ ಸಲ್ಲ

Breastfeeding is a misconception
ವಿಜಯಪುರ ನಗರದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎಲ್. ಲಕ್ಕಣ್ಣವರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಾ. ಸುರೇಶ ಚವ್ಹಾಣ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಬಲವಂತರಾಯ್ ಮಸಳಿ ಹಾಗೂ ಪ್ರಸೂತಿ ಹಾಗೂ ಸೀರೋಗ ತಜ್ಞೆ ಭಾಗ್ಯಶ್ರೀ ಪೂಜಾರಿ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ್ ಉಪಸ್ಥಿತರಿದ್ದರು.
Published on

ವಿಜಯಪುರ: ನವಜಾತ ಶಿಶುಗಳಿಗೆ ಹಾಲುಣಿಸುವ ಪ್ರಕ್ರಿಯೆಯಲ್ಲಿ ಅನೇಕ ತಪ್ಪು ಕಲ್ಪನೆಗಳು ಕಾಣುತ್ತಿದ್ದೇವೆ. ಇದೇ ಕಾರಣದಿಂದ ಶಿಶುಗಳಿಗೆ ಹಾಲುಣಿಸಲು ತಾಯಿಂದಿರು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎಲ್.ಲಕ್ಕಣ್ಣವರ ಕಳವಳ ವ್ಯಕ್ತ ಪಡಿಸಿದರು.

ವಿಜಯಪುರ ನಗರದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಹಾಲಿನ ಮಹತ್ವ ಬಹಳಷ್ಟು ಜನರಿಗೆ ತಿಳಿಯುತ್ತಿಲ್ಲ. ತಾಯಿಗೆ ಮತ್ತು ಮಗುವಿಗೆ ಇದರಿಂದ ಆಗುವ ಪ್ರಯೋಜನಗಳ ಅರಿವಿಲ್ಲ. ಮಕ್ಕಳಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯವಂತ ವ್ಯಕ್ತಿಗಳನ್ನಾಗಿ ತಯಾರು ಮಾಡುವಲ್ಲಿ ತಾಯಿಯ ಸ್ತನ್ಯ ಹಾಲು ಮಹತ್ತರ ಪಾತ್ರವಹಿಸುತ್ತದೆ. ಇದು ಕೇವಲ ಮಗುವಿಗೆ ಮಾತ್ರವಲ್ಲದೇ ಹಾಲುಣಿಸುವ ತಾಯಿಯ ಆರೋಗ್ಯಕ್ಕೂ ಉತ್ತಮವಾದುದು ಎಂದರು.

ಡಾ. ಸುರೇಶ ಚವ್ಹಾಣ ಮಾತನಾಡಿ, ತಾಯಿ ಹಾಲಿನ ಮಹತ್ವ ಅರಿತರೇ ಸಾಲದು ಅದನ್ನು ಹೆಚ್ಚು ಜನರಿಗೆ ಪ್ರಚಾರ ಮಾಡುವ ಅಗತ್ಯ ಇದೆ. ಈ ಮೂಲಕ ಜನರಲ್ಲಿರುವ ತಪ್ಪು ತಿಳಿವಳಿಕೆ ದೂರುಮಾಡಿ, ಅದರಿಂದ ಆಗುವ ಲಾಭಗಳ ಕುರಿತು ಅರಿವು ಮೂಡಿಸಬೇಕು. ಆಗ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಅರ್ಥ ಬರುತ್ತದೆ ಎಂದರು.

ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಬಲವಂತರಾಯ್ ಮಸಳಿ ಹಾಗೂ ಪ್ರಸೂತಿ ಹಾಗೂ ಸೀರೋಗ ತಜ್ಞೆ ಭಾಗ್ಯಶ್ರೀ ಪೂಜಾರಿ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣ ಮಳಖೇಡ್ಕರ್, ಡಾ. ರವೀಂದ್ರ ತೋಟದ, ಡಾ. ಗುಂಡಪ್ಪ ಎಸ್.ವಿ, ಡಾ. ವಿನಯ್ ಮಲಕಣ್ಣವರ, ಬಿಸನಾಳ, ಡಾ. ಜಿ.ಎಂ. ಕೋಲಾರ ಉಪಸ್ಥಿತರಿದ್ದರು. ನರ್ಸಿಂಗ್ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net