ಸ್ಟ್ರೆಂತ್ ಲಿಫ್ಟಿಂಗ್ ಮತ್ತು ಐಬಿಪಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ

ಸ್ಟ್ರೆಂತ್ ಲಿಫ್ಟಿಂಗ್ ಮತ್ತು ಐಬಿಪಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ ಸ್ಥಾನ
Published on

ಹಾಸನ: ರಾಜಸ್ಥಾನದ ಉದಯಪುರದಲ್ಲಿ ಜು.30ರಂದು ನ್ಯಾಷನಲ್ ಸ್ಟ್ರೆಂತ್ ಲಿಫ್ಟಿಂಗ್ ಮತ್ತು ಐಬಿಪಿ ಚಾಂಪಿಯನ್‌ಷಿಪ್‌ನಲ್ಲಿ 76 ಕೆ.ಜಿ. ವಿಭಾಗದಲ್ಲಿ ಕರ್ನಾಟಕದಿಂದ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಗಳಿಸಿದ್ದೇನೆ ಎಂದು ಬಾಡಿ ಬಿಲ್ಡರ್ ಎಂ.ಎಸ್. ಸುನಿಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕುಟುಂಬದಿಂದ ಬಂದಿದ್ದು, ಏನಾದರೂ ಸಾಧಿಸಬೇಕೆಂಬ ಛಲದಿಂದ ಬಾಡಿ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಮತ್ತು ಸ್ಟ್ರೆಂತ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದೇನೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಮಾರ್ಚ್ 12 ರಂದು ನಡೆದ ರಾಷ್ಟ್ರೀಯ ಮಟ್ಟದ ಬಾಡಿ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ತಂದು ಕೊಟ್ಟಿದ್ದೇನೆ. ಅದಲ್ಲದೆ ಹೊಸಪೇಟೆಯಲ್ಲಿ ನಡೆದಂತಹ ಪವರ್ ಲಿಫ್ಟಿಂಗ್‌ನಲ್ಲಿ ಕೂಡ ಚಿನ್ನದ ಪದಕ ಪಡೆದಿದ್ದೇನೆ.ಇದಕ್ಕೆಲ್ಲ ನಮ್ಮ ತಂದೆ ತಾಯಿಯವರು ಮತ್ತು ಸ್ನೇಹಿತರ ಸಹಕಾರದಿಂದ ಸಾಧ್ಯವಾಗಿದೆ ಅವರೆಲ್ಲರಿಗೂ ಕೂಡ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್, ಜಗದೀಶ್, ರಾಕೇಶ್ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net