

ಚಿತ್ರದುರ್ಗ: ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಶಾಲೆಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ.
ಶಾಲೆಯ ವಿದ್ಯಾರ್ಥಿಗಳಾದ ಆರ್.ಶ್ರೀನಿವಾಸ್ ಆಚಾರಿ, ಜಿ.ಎಸ್.ಹೇಮಂತ್‌ಗೌಡ, ಜಿ.ಎ.ಸಿರಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಂಸ್ಥೆಯ ಗೌರವ ಅಧ್ಯಕ್ಷ ಎಂ.ಎ.ಸೇತುರಾಂ, ಅಧ್ಯಕ್ಷೆ ಎಸ್.ಸೀಮಾ, ಕಾರ್ಯದರ್ಶಿ ಎಸ್.ಶ್ರೀಹರ್ಷ, ಶಾಲೆಯ ಪ್ರಾಚಾರ್ಯರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.