

ಚಿತ್ರದುರ್ಗ: ಸನಾತನ ಹಿಂದು ಧರ್ಮ ಅವಮಾನಿಸಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಧರ್ಮ ಅವಮಾನಿಸುವುದು ಅತ್ಯಂತ ಖಂಡನೀಯ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಲೇಬೇಕು ಎಂದು ರಾಷ್ಟ್ರಪತಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಸನಾತನ ಹಿಂದು ಧರ್ಮವನ್ನು ಡೆಂಘೆ ರೋಗಕ್ಕೆ ಹೋಲಿಸಿ ಉದ್ದೇಶಪೂರ್ವಕವಾಗಿ ಉದಯನಿಧಿ ಸ್ಟಾಲಿನ್ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಲಕ್ಷಾಂತರ ಹಿಂದುಗಳ ಧಾರ್ಮಿಕ ಭಾವನೆ, ನಂಬಿಕೆಗೆ ಧಕ್ಕೆ ಉಂಟು ಮಾಡಿ ಸಾಮರಸ್ಯ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ದುರುದ್ದೇಶಕ್ಕೆ ಧರ್ಮವನ್ನು ಅವಹೇಳನ ಮಾಡಿದ್ದಾರೆ. ಅವರ ಹೇಳಿಕೆಗಳು ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧ. ಹೀಗಾಗಿ ಕಾನೂನು ಕ್ರಮ ಜರುಗಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೋರಿದರು.
ವೇದಿಕೆ ಜಿಲ್ಲಾ ಸಂಚಾಲಕ ವೀರೇಂದ್ರಕುಮಾರ್, ಶಿವಶಕ್ತಿ ಬಾಲಾಜಿ, ರವಿಕುಮಾರ್, ಗರುಡ ಕೇಸರಿ ಕುಮಾರ್ ಇತರರಿದ್ದರು.