

ಕಲಬುರಗಿ: ಉದಯನಿಧಿ ಸ್ಟಾಲಿನ್ ಅವರು ಸನಾತನ ಹಿಂದೂ ಧರ್ಮದ ನೀಡಿದ ಹೇಳಿಕೆಯನ್ನು ಮಹಾಗಾಂವ್ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಸನಾತನ, ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿದ್ದಾರೆ. ತಮಿಳುನಾಡಿನ ರಾಜಕಾರಣದಲ್ಲಿ ನಿರಂತರವಾಗಿ ಆರ್ಯ-ದ್ರಾವಿಡ ಎಂಬ ಸಮಸ್ಯೆಯನ್ನು ಹುಟ್ಟು ಹಾಕಿ ಅದರ ಮೂಲಕ ರಾಜಕಾರಣ ಮಾಡುವುದನ್ನು ಕಂಡಿದ್ದೇವೆ. ಆ ರಾಜಕಾರಣದ ಮುಂದುವರೆದ ಭಾಗವಾಗಿ ಸನಾತನ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಡಿಎಂಕೆ ಪಕ್ಷವು ಐಎನ್ ಡಿಐಎ (ಯುಪಿಎ) ಜೊತೆ ಸೇರಿದೆ. ಇಂಡಿಯಾ ಅಂಗಪಕ್ಷಗಳು ಇದರ ಕುರಿತು ಏನು ಹೇಳುತ್ತವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಭಾರತದಲ್ಲಿ ಆತ್ಮ ಹಿಂದೂತ್ವ. ಈ ದೇಶದ ಬಹುಸಂಖ್ಯಾತ ಜನರು ಹಿಂದೂಗಳು. ಭಾರತವನ್ನೇ ಹಿಂದೂ ರಾಷ್ಟ್ರ ಎಂದು ಕರೆಯಲಾಗುತ್ತಿದೆ. ಇಲ್ಲಿ ಇರುವ ಧರ್ಮ ಒಂದೇ, ಅದು ಹಿಂದೂ ಧರ್ಮ ಎಂದು ಪ್ರತಿಪಾದಿಸಿದರು.