ಸ್ಟಾಪ್ ಟೊಬ್ಯಾಕೋ ಮೊಬೈಲ್‌ಆ್ಯಪ್ ಬಿಡುಗಡೆ

tobacco
Published on


ಚಿತ್ರದುರ್ಗ:ರಾಷ್ಟ್ರಿಯ ತಂಬಾಕು ನಿಯಂತ್ರಣ ಕಾರ‌್ಯಕ್ರಮದಡಿ ಸಾರ್ವಜನಿಕರ ಬಳಕೆಗಾಗಿ ಸ್ಟಾಪ್ ಟೊಬ್ಯಾಕೋ(Stoptobacco Mobile)ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಆ್ಯಪ್‌ನಲ್ಲಿ ದೂರು ಸಲ್ಲಿಸಬಹುದು.
ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಕ್ಯೂ ಆರ್ ಕ್ಯೂಡ್ ಬಳಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ತಂಬಾಕು ನಿ ಯಂತ್ರಣಾಧಿಕಾರಿ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net