

ಕಲಬುರಗಿ: ಸ್ಟಾಕ್ ಮರ್ಕೆಟ್ನಲ್ಲಿ ಆದಾಯ ಮಾಡಿಕೊಡುತ್ತೇನೆ ಎಂದು ಆಮಿಷವೊಡ್ಡಿ ೮೦.೭೦ ಲಕ್ಷ ರೂ. ಮೋಸ ಮಾಡಿದ ಟನೆ ನಗರದಲ್ಲಿ ನಡೆದಿದೆ. ಬೀದರ್ ಓಲ್ಡ್ ಸಿಟಿ ನಿವಾಸಿ, ವ್ಯಾಪಾರಿ ಅನುಪಕುಮಾರ ವೀರಶೆಟ್ಟಿ ಮೋಸಕ್ಕೆ ಒಳಗಾದವ. ಅನೂಪ ಬೋರವೆಲ್ಸ್ ಉದ್ಯಮ ನಡೆಸುತ್ತಿದ್ದು, ಕಲಬುರಗಿ ನಗರದ ಶ್ರೀಧರ ದೇಶಪಾಂಡೆ ಪರಿಚಯವಾಗಿದೆ. ಸ್ಟಾಕ್ ಮರ್ಕೆಟ್ನಲ್ಲಿ ಅನುಭವವಿದ್ದು, ಹಣ ನೀಡಿದರೆ ಲಾಭ ಮಾಡಿಕೊಡುವುದಾಗಿ ಶ್ರೀಧರ ಆಮಿಷ ಒಡ್ಡಿದ್ದಾನೆ. ಆಮಿಷಕ್ಕೆ ಬಲಿಯಾದ ಅನೂಪ ಹಂತ ಹಂತವಾಗಿ ಒಟ್ಟು ೮೦.೭೦ ಲಕ್ಷ ರೂ. ನೀಡಿದ್ದಾನೆ. ಆದರೆ ಇದುವರೆಗೆ ಯಾವುದೇ ಲಾಭ ನೀಡದೆ ಮೋಸ ಮಾಡಿದ್ದಾರೆ ಎಂದು ಅನೂಪ ವೀರಶೆಟ್ಟಿ ನಗರದ ಬ್ರಹ್ಮಪುರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.