ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ,ವೈದ್ಯರ ನೋಂದಣಿ ಕಡ್ಡಾಯ

CTD 6 SCANING--04
Published on

ಚಿತ್ರದುರ್ಗ: ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ(ಪಿಸಿ ಆ್ಯಂಡ್ ಪಿಎನ್‌ಡಿಟಿ)ಅನ್ವಯ ವೈದ್ಯರಿಗೆ, ಅಲ್ಟ್ರಾಸೌಂ ಡ್‌ಸ್ಕ್ಯಾನಿಂಗ್‌ನ ಎರಡು ಸೆಂಟರ್‌ಗಳಲ್ಲಿ ಸೇವೆ ಸಲ್ಲಿಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರ ಸಾದ್ ತಿಳಿಸಿದರು.
ಡಿಎಚ್‌ಒ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾ ಡಿದ ಅವರು, ವೈದ್ಯರು ತಾವು ಭೇಟಿ ನೀಡುವ ಸ್ಕ್ಯಾನಿಂಗ್ ಸೆಂಟರ್ ಹಾಗೂ ಸಮಯವನ್ನು ಕಡ್ಡಾಯ ನೋಂದಣಿ ಮಾಡಬೇಕೆಂದ ರು.
ಜಿಲ್ಲೆಯ 2 ಸೆಂಟರ್‌ಗಳನ್ನು ಹೊರತು ಪಡಿಸಿ, ಅನ್ಯಜಿಲ್ಲೆಗಳ ಸೆಂಟರ್‌ಗಳಲ್ಲಿ ಸೇವೆ ಸಲ್ಲಿಸಬಹುದೇ ಎಂಬ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಅಗತ್ಯವಿದೆ ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಕಳೆದ ವರ್ಷ ಲಿಂಗಾನುಪಾತ 967 ದಾಖಲಾಗಿತ್ತು. 1000 ಗಂ ಡು ಮಕ್ಕಳಿಗೆ 967 ಹೆಣ್ಣು ಮಕ್ಕಳ ಜನನವಾಗಿದೆ. ಈ ವರ್ಷ ಅಕ್ಟೋಬರ್ ಅಂತ್ಯದವರೆಗೆ 5602-ಗಂಡು, 5292-ಹೆಣ್ಣು ಮಕ್ಕಳ ಜನನ ವಾಗಿದ್ದು,ಲಿಂಗಾನುಪಾತ 945 ದಾಖಲಾಗಿದೆ.
ಮೊಳಕಾಲ್ಮೂರು ತಾಲೂಕಿನಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ಇಲ್ಲಿ ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳ ಜನನ ಹೆಚ್ಚಿದೆ, ಇಲ್ಲಿ ಲಿಂ ಗಾನುಪಾತ-1100 ದಾಖಲಾಗಿದೆ. ಚಳ್ಳಕೆರೆ-989, ಚಿತ್ರದುರ್ಗ-968, ಹೊಳಲ್ಕೆರೆ-921 ದಾಖಲಾಗಿದ್ದರೆ, ಹೊಸದುರ್ಗ ತಾಲೂಕಿನಲ್ಲಿ ಅತ್ಯಂತ ಕನಿಷ್ಠ 866 ಲಿಂಗಾನುಪಾತ ದಾಖಲಾಗಿದೆ, ಇಲ್ಲಿ 411 ಗಂಡುಮಕ್ಕಳು, 356 ಹೆಣ್ಣು ಮಕ್ಕಳ ಜನನವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಲಿಂಗಾನುಪಾತದಲ್ಲಿ ವ್ಯತ್ಯಾಸ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಸಮಿತಿ ಸದಸ್ಯ ಡಾ.ಸತ್ಯನಾರಾ ಯಣ, ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ ಅಗತ್ಯವಿದೆ. ಮಂಡ್ಯ ಜಿಲ್ಲೆಯಲ್ಲಿ ಕೇಳಿಬಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದಿ ದೆ. ಈ ಕುರಿತಂತೆ ನಮ್ಮ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸ ಬೇಕೆಂದು ಸಲಹಾ ಸಮಿತಿ ಅಧ್ಯಕ್ಷೆ ಡಾ.ಎಸ್.ಸೌಮ್ಯ, ಕಾನೂನು ಸಲಹೆಗಾರ ಎಂ.ಉಮೇಶ್ ಮತ್ತಿತರರು ಒತ್ತಾಯಿಸಿದರು.
ಜಿಲ್ಲೆಯಲ್ಲಿ 12 ಸರ್ಕಾರಿ ಹಾಗೂ 60 ಖಾಸಗಿ ಸೇರಿ 72 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಕಾಯ್ದೆ ಉಲ್ಲಂಘಿಸುವ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಡಿಎಚ್‌ಒ ಹೇಳಿದರು. ಹೊಸ ಸ್ಕ್ಯಾನಿಂಗ್ ಸೆಂಟರ್ ಪ್ರಾರಂಭಕ್ಕೆ 5 ಅರ್ಜಿಗಳು ಬಂದಿವೆ ಎಂದರು. ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಸಭೆ ಒಪ್ಪಿಗೆ ನೀಡಿತು. ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾ ರಾಂರಾವ್, ಗಾಯತ್ರಿಶಿವರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net